ಕರ್ನಾಟಕ ವಿಶ್ವವಿದ್ಯಾಲಯ ಮಾಧ್ಯಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರ ನೇರ ನೇಮಕಾತಿಗೆ ಅರ್ಜಿ ಆಹ್ವಾನ: KUD School Teacher Recruitment Notification 2023
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಅಡಿಯಲ್ಲಿ ಬರುವ ಮಾಧ್ಯಮಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಇದರಲ್ಲಿ ಖಾಲಿ ಇರುವ ಸಹಾಯಕ ಶಿಕ್ಷಕರು, ವಿಶೇಷ ಶಿಕ್ಷಕರು, & ಸಹಾಯಕ ಹೌಸ್ ಕೀಪರ್ ಹುದ್ದೆಗಳ ಭರ್ತಿಗೆ ನಿಗದಿತ ಅರ್ಜಿ ನಮೂನೆಯ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಅರ್ಜಿ ಸಲ್ಲಿಸಲು 18-11-2023 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು Speed Post/ Register Post ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
ಜಿಲ್ಲಾ ಆಯುಷ್ ಕಾರ್ಯಾಲಯದಲ್ಲಿ ಖಾಲಿ ಇರುವ ಸಹಾಯಕ, ಅಟೆಂಡರ್ & ಮಲ್ಟಿ ಪರ್ಪಸ್ ವರ್ಕರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಮಾಧ್ಯಮಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಪಿಯುಸಿ ಮುಗಿದವರಿಗೆ ಗುಮಾಸ್ತ ಹುದ್ದೆಗಳ ನೇಮಕಾತಿಗೆ ಅನುದಾನಿತ ಕಾಲೇಜಿನಿಂದ ಅರ್ಜಿ ಆಹ್ವಾನ: SVES Recruitment 2023
ಹುದ್ದೆಗಳ ವಿವರ:
ಮಾಧ್ಯಮಿಕ ಶಾಲೆ (5 ರಿಂದ 12ನೇ ತರಗತಿವರೆಗೆ)
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಸಹಾಯಕ ಶಿಕ್ಷಕರು | 09 ಹುದ್ದೆಗಳು |
ಸಂಗೀತ ಶಿಕ್ಷಕ | 01 |
ಸಹಾಯಕ ಹೌಸ್ ಮಾಸ್ಟರ್ ಕಂ ಸಹಾಯಕ ಶಿಕ್ಷಕ | 01 |
ಸಹಾಯಕ ಹೌಸ್ ಮಾಸ್ಟರ್ | 01 |
ಪ್ರಾಥಮಿಕ ಕನ್ನಡ ಶಾಲೆ:
ಸಹಾಯಕ ಶಿಕ್ಷಕರು | 02 |
ವೇತನ ಶ್ರೇಣಿ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಸಹಾಯಕ ಶಿಕ್ಷಕರು | 33450-62600 |
ಸಂಗೀತ ಶಿಕ್ಷಕ | 27650-52650 |
ಸಹಾಯಕ ಹೌಸ್ ಮಾಸ್ಟರ್ ಕಂ ಸಹಾಯಕ ಶಿಕ್ಷಕ | 33450-62600 |
ಸಹಾಯಕ ಹೌಸ್ ಮಾಸ್ಟರ್ | 30350-58250 |
ಸಹಾಯಕ ಶಿಕ್ಷಕರು (ಪ್ರಾಥಮಿಕ ಶಾಲೆ) | 25000-51400 |
ಕರ್ನಾಟಕ ಸರ್ಕಾರದ ವೇತನ ನಿಯಮಾವಳಿಗಳ ಪ್ರಕಾರ ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.
ಶೈಕ್ಷಣಿಕ ಅರ್ಹತೆಗಳು:
ಸಹಾಯಕ ಶಿಕ್ಷಕರು:
ಸಂಬಂಧಿಸಿದ ವಿಷಯದಲ್ಲಿ ಕನಿಷ್ಟ 50% ಅಂಕಗಳೊಂದಿಗೆ (SC, ST, Cat 1 & PWD ಅಭ್ಯರ್ಥಿಗಳಿಗೆ 45%) ಸ್ನಾತಕೋತ್ತರ ಪದವಿ ಮುಗಿಸಿರಬೇಕು & ಬಿಎಡ್ ಮುಗಿಸಿರಬೇಕು. KARTET ಪರೀಕ್ಷೆಯನ್ನು ಉತ್ತೀರ್ಣಗೊಳಿಸಿರಬೇಕು.
ಸಂಗೀತ ಶಿಕ್ಷಕರು:
ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಗೀತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು.
ಸಹಾಯಕ ಹೌಸ್ ಮಾಸ್ಟರ್ ಕಮ್ ಸಹಾಯಕ ಶಿಕ್ಷಕರು:
ಕಲಾ ನಿಕಾಯ ವಿಷಯದಲ್ಲಿ ಕನಿಷ್ಟ 50% ಅಂಕಗಳೊಂದಿಗೆ (SC, ST, Cat 1 & PWD ಅಭ್ಯರ್ಥಿಗಳಿಗೆ 45%) ಸ್ನಾತಕೋತ್ತರ ಪದವಿ ಮುಗಿಸಿರಬೇಕು.
ಸಹಾಯಕ ಹೌಸ್ ಮಾಸ್ಟರ್:
ವಿಜ್ಞಾನ ವಿಷಯದಲ್ಲಿ ಕನಿಷ್ಟ 50% ಅಂಕಗಳೊಂದಿಗೆ (SC, ST, Cat 1 & PWD ಅಭ್ಯರ್ಥಿಗಳಿಗೆ 45%) ಸ್ನಾತಕಪದವಿ ಮುಗಿಸಿರಬೇಕು & ಬಿಎಡ್ ಪದವಿ ಹೊಂದಿರಬೇಕು.
ಸಹಾಯಕ ಶಿಕ್ಷಕರು ( ಪ್ರಾಥಮಿಕ ಶಾಲೆ):
ಕನಿಷ್ಟ 50% ಅಂಕಗಳೊಂದಿಗೆ (SC, ST, Cat 1 & PWD ಅಭ್ಯರ್ಥಿಗಳಿಗೆ 45%) ಪಿಯುಸಿ ಮುಗಿಸಿರಬೇಕು & ಎರಡು ವರ್ಷಗಳ ಡಿಎಡ್ ಮುಗಿಸಿರಬೇಕು ಹಾಗೂ KARTET ಉತ್ತೀರ್ಣಗೊಳಿಸಿರಬೇಕು.
ಅರ್ಜಿ ಶುಲ್ಕ :
ಸಾಮಾನ್ಯ ಅರ್ಹತಾ & ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ: ರೂ. 1250/-
ಪ.ಜಾ/ ಪಪಂ/ ಕೆ1/ ವಿಕಚೇತನ ಅಭ್ಯರ್ಥಿಗಳಿಗೆ : ರೂ. 625/-
ವಯೋಮಿತಿ/ Age limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 42 ವರ್ಷವನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಆಯ್ಕೆವಿಧಾನ:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಮೌಖಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ:
ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಫೋಟೊ, ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದ್ವಿಪ್ರತಿಯಲ್ಲಿ ದಿನಾಂಕ: 18.11.2023 ರ ಒಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಅಧಿಸೂಚನೆಯಲ್ಲಿ ತಿಳಿಸಲಾದ ಬ್ಯಾಂಕ್ ವಿಳಾಸಕ್ಕೆ ಸಲ್ಲಿಸುವುದು. ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 0836-2215349
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 17-10-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-11-2023
Important Links/ ಪ್ರಮುಖ ಲಿಂಕುಗಳು:
Pingback: ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಕೇಸ್ ವರ್ಕರ್, ಸೆಕ್ಯೂರಿಟಿ ಸೇರಿದಂತೆ ವಿವಿಧ ಹುದ್ದೆಗಳ ಭರ
Pingback: ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ 184 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನ- PGCIL Recruitment N