ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಭರ್ತಿ 2023: ಕಿರಿಯ ಸಹಾಯಕ, ಸಂಚಾರ ನಿಯಂತ್ರಕ, ನಿರ್ವಾಹಕ & ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ಚಾಲನೆ- KSRTC Transport Dept. Recruitment 2023
ಕರ್ನಾಟಕ ಉದ್ಯೋಗ ಆಕಾಂಕ್ಷಿಗಳಿಗೆ ಸಾರಿಗೆ ಇಲಾಖೆಯಲ್ಲಿ ಮತ್ತೊಂದು ಬೃಹತ್ ನೇಮಕಾತಿ ಅಧಿಸೂಚನೆ ಶೀಘ್ರದಲ್ಲಿಯೇ ಹೊರಬಿಳಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತಂತೆ ವೃಂದ & ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಅದರ ವಿದ್ಯಾರ್ಹತೆಯನ್ನು ನಿಗದಿಪಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ಸಹಾಯಕ ಸಂಚಾರ ನಿರೀಕ್ಷಕ, ನಿರ್ವಾಹಕ, ಕಿರಿಯ ಸಹಾಯಕ ಕಮ್ ಡಾಟಾ ಎಂಟ್ರಿ ಆಪರೇಟರ್, ಕಿರಿಯ ಶೀಘ್ರಲಿಪಿಗಾರ, ಕರಾಸಾ ಪೇದೆ ಮುಂತಾದ ಹುದ್ದೆಗಳಿಗೆ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಟ ವಿದ್ಯಾರ್ಹತೆ ಏನು ಎಂಬುದನ್ನು ನಿಗದಿಪಡಿಸಲಾಗಿದೆ. ಈ ಮುಂಚೆಯಲ್ಲಿ ಇದ್ದಂತಹ ವಿದ್ಯಾರ್ಹತೆಯನ್ನು ಪರಿಷ್ಕರಿಸಿ ಹೊಸ ವಿದ್ಯಾರ್ಹತೆಯನ್ನು ತಿಳಿಸಲಾಗಿದೆ.
ಹುದ್ದೆಗಳ ವಿವರವನ್ನು ಗಮನಿಸಿ:
ಸಹಾಯಕ ಸಂಚಾರ ನಿರೀಕ್ಷಕ |
ಸಂಚಾರ ನಿಯಂತ್ರಕ |
ನಿರ್ವಾಹಕ |
ಕಿರಿಯ ಸಹಾಯಕ ಕಮ್ ಡಾಟಾ ಎಂಟ್ರಿ ಆಪರೇಟರ್ |
ಕಿರಿಯ ಶೀಘ್ರಲಿಪಿಗಾರ |
ಕ.ರಾ.ಸಾ ಪೇದೆ |
ಹೊಸದಾಗಿ ನಿಗದಿಪಡಿಸಿದ ವಿದ್ಯಾರ್ಹತೆ :
ಸಹಾಯಕ ಸಂಚಾರ ನಿರೀಕ್ಷಕ/ Assistant Traffic Inspector:
ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯ/ ಮಂಡಳಿಯಿಂದ ಪಿಯುಸಿ ಅಥವಾ ಮೂರು ವರ್ಷಗಳ ಡಿಪ್ಲೋಮಾ ಮುಗಿಸಿರಬೇಕು.
ಸಂಚಾರಿ ನಿಯಂತ್ರಕ/ Traffic Controller:
ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯ/ ಮಂಡಳಿಯಿಂದ ಪಿಯುಸಿ ಅಥವಾ ಮೂರು ವರ್ಷಗಳ ಡಿಪ್ಲೋಮಾ ಮುಗಿಸಿರಬೇಕು.
ನಿರ್ವಾಹಕ/ Conductor:
ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯ/ ಮಂಡಳಿಯಿಂದ ಪಿಯುಸಿ ಅಥವಾ ಮೂರು ವರ್ಷಗಳ ಡಿಪ್ಲೋಮಾ ಮುಗಿಸಿರಬೇಕು
ಚಾಲ್ತಿಯಲ್ಲಿರುವ M.V Conductor ಲೈಸನ್ಸ್ & ಬ್ಯಾಡ್ಜ್ ಹೊಂದಿರುವುದು ಕಡ್ಡಾಯವಾಗಿದೆ.
ದೈಹಿಕವಾಗಿ ಸದೃಡವಾಗಿರಬೇಕು.
ಕಿರಿಯ ಸಹಾಯಕ ಕಮ್ ಡಾಟಾ ಎಂಟ್ರಿ ಆಪರೇಟರ್:
ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯ/ ಮಂಡಳಿಯಿಂದ ಪಿಯುಸಿ ಅಥವಾ ಮೂರು ವರ್ಷಗಳ ಡಿಪ್ಲೋಮಾ ಮುಗಿಸಿರಬೇಕು.
ಕಿರಿಯ ಸ್ಟೆನೋಗ್ರಾಫರ್/ Junior Stenographer:
ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯ/ ಮಂಡಳಿಯಿಂದ ಪಿಯುಸಿ ಅಥವಾ ಮೂರು ವರ್ಷಗಳ ಡಿಪ್ಲೋಮಾ ಮುಗಿಸಿರಬೇಕು.
ಅಂಗೀಕೃತ ಬೋರ್ಡ್ ನಿಂದ ಜೂನಿಯರ್ Short Hand & ಸೀನಿಯರ್ Typewriting ಕೋರ್ಸ್ ಮುಗಿದಿರಬೇಕು.
ಕರಾಸಾ ಪೇದೆ/ KST Constable:
ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯ/ ಮಂಡಳಿಯಿಂದ ಪಿಯುಸಿ ಅಥವಾ ಮೂರು ವರ್ಷಗಳ ಡಿಪ್ಲೋಮಾ ಮುಗಿಸಿರಬೇಕು.
ದೈಹಿಕವಾಗಿ ಸದೃಡವಾಗಿರಬೇಕು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತಂತೆ ಮೇಲೆ ನೀಡಲಾದ ವಿದ್ಯಾರ್ಹತೆಯನ್ನು ನಿಗದಿಪಡಿಸಿದ್ದು, ಶೀಘ್ರದಲ್ಲಿಯೇ ನಡೆಯಲಿರುವ ನೇಮಕಾತಿಗೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿದವರು ಸಿದ್ದತೆ ಮಾಡಿಕೊಳ್ಳಬಹುದು. ಈ ನೋಟಿಫಿಕೇಶನ್ ಪಡೆಯಲು ಕೆಳಗೆ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಅಧಿಕೃತ ಲಿಂಕ್/ Official Links:
Pingback: ರೆಪ್ಕೋ ಮೈಕ್ರೊ ಫೈನಾನ್ಸ್ ನಲ್ಲಿ ಖಾಲಿ ಇರುವ ಆಡಳಿತ ಸಹಾಯಕ & ಇತರೆ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ಯಾವ
Pingback: NEST ನಲ್ಲಿ ಖಾಲಿ ಇರುವ 2570 ಪಿಜಿಟಿ ಶಿಕ್ಷಕರು & ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: NEST Teacher Recruitment 2023 - edutechkannada.com