KPSC RDWSD & PWD ಇಲಾಖೆಯ ನೇಮಕಾತಿ: AE & JE ಹುದ್ದೆಗಳ ನೇಮಕಾತಿ ಕುರಿತಾದ ಮಹತ್ವದ ಪ್ರಕಟಣೆ

Click to Share

KPSC RDWSD & PWD ಇಲಾಖೆಯ ನೇಮಕಾತಿ: AE & JE ಹುದ್ದೆಗಳ ನೇಮಕಾತಿ ಕುರಿತಾದ ಮಹತ್ವದ ಪ್ರಕಟಣೆ

ದಿನಾಂಕ 21-02-2022ರಲ್ಲಿ ಅಧಿಸೂಚಿಸಲಾಗಿದ್ದ  ಗ್ರಾಮೀಣ & ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಅಭಿಯಂತರರು(ಗ್ರೇಡ್-1) 288 ಹುದ್ದೆಗಳ ನೇಮಕಾತಿ  & ಈಗಾಗಲೇ ದಿನಾಂಕ:30-07-2020ರಲ್ಲಿ ಅಧಿಸೂಚಿಸಲಾಗಿದ್ದ, ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು (ಸಿವಿಲ್) 660 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ  ದಿನಾಂಕ:26-01-2023 ರಂದು ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿತ್ತು. 

ಮೇಲೆ ನೀಡಲಾಗಿರುವ ಎರಡು ಇಲಾಖೆಗಳಲ್ಲಿ ಆಯ್ಕೆಯಾಗಿರುವ  ಅಭ್ಯರ್ಥಿಗಳು ಆಯೋಗದ ನಿರ್ಣಯದನುಸಾರ ಮೇಲ್ಕಂಡ ಹುದ್ದೆಗಳ ಪೈಕಿ ನೀವು ಆಯ್ಕೆಯಾಗಲಿಚ್ಛಿಸುವ ಒಂದು ಹುದ್ದೆಯನ್ನು ಹಾಗೂ ಆಯ್ಕೆಯಿಂದ ಕೈಬಿಡಬೇಕಾದ ಹುದ್ದೆಗಳ ವಿವರವನ್ನು ಕಡ್ಡಾಯವಾಗಿ ದಿನಾಂಕ: 24-07-2023ರೊಳಗೆ ಯಾವುದಾದರೊಂದು ಮೂಲ ಗುರುತಿನ ಚೀಟಿಯೊಂದಿಗೆ ಕಾರ್ಯದರ್ಶಿ, ಕರ್ನಾಟಕ ಲೋಕ ಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು, ಇವರ ಸಮ್ಮುಖದಲ್ಲಿ ಖುದ್ದು ಹಾಜರಾಗಿ ಲಿಖಿತವಾಗಿ ಸ್ವ-ಇಚ್ಛಾ ಹೇಳಿಕೆಯನ್ನು ಸಲ್ಲಿಸುವಂತೆ ಸೂಚಿಸಿದೆ.

ಖಾದಿ & ಗ್ರಾಮೋದ್ಯೋಗ ಆಯೋಗದಿಂದ ಅಧಿಸೂಚನೆ ಪ್ರಕಟ| GVY ಯೋಜನೆಯಲ್ಲಿ ಉಚಿತ ತರಬೇತಿ | GVY Training 2023

ಒಂದು ವೇಳೆ ಅಭ್ಯರ್ಥಿಗಳು ಸ್ವ-ಇಚ್ಛಾ ಲಿಖಿತ ಹೇಳಿಕೆಯನ್ನು ಸಲ್ಲಿಸದಿದ್ದಲ್ಲಿ, ಅಂತಹ ಅಭ್ಯರ್ಥಿಗಳನ್ನು ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಇಂಜಿನೀಯರ್ (ವಿಭಾಗ-1) (ಸಿವಿಲ್) ಹುದ್ದೆಗೆ ಒಪ್ಪಿಗೆಯಿದೆ ಎಂದು ಪರಿಗಣಿಸಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು(ಗ್ರೇಡ್-1) ಮತ್ತು ಕಿರಿಯ ಅಭಿಯಂತರರು ಹುದ್ದೆಗಳ ನೇಮಕಾತಿಯಿಂದ ಕೈ ಬಿಟ್ಟು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು(ಗ್ರೇಡ್ -1) ಮತ್ತು ಕಿರಿಯ ಅಭಿಯಂತರರು ಹುದ್ದೆಗಳ ನೇಮಕಾತಿಗೆ ಕೆಳ ಜೇಷ್ಠತೆಯ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು”.

ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದಿಂದ ಹೊಸ ನೇಮಕಾತಿ ಪ್ರಕಟಣೆ

ಮುಂದುವರೆದು, “ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ (ವಿಭಾಗ-1) (ಸಿವಿಲ್) ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು (ಗ್ರೇಡ್-1)/ಕಿರಿಯ ಅಭಿಯಂತರರು ಹುದ್ದೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಆಯ್ಕೆಯಾಗಿ ಸ್ವ-ಇಚ್ಛಾ ಲಿಖಿತ ಹೇಳಿಕೆ ನೀಡಿ ಅಥವಾ ನೀಡದೇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು (ಗ್ರೇಡ್-1) ಅಥವಾ ಕಿರಿಯ ಅಭಿಯಂತರರು ಹುದ್ದೆಯನ್ನು ಬಿಟ್ಟುಕೊಟ್ಟಿರುವ ಅಭ್ಯರ್ಥಿಗಳ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗಳ ಆಯ್ಕೆಯು ಒಂದು ವೇಳೆ ಯಾವುದಾದರೂ ಕಾರಣಕ್ಕಾಗಿ ಅಸಿಂಧುವಾದಲ್ಲಿ, ಸದರಿ ಅಭ್ಯರ್ಥಿಗಳ ಬದಲಿಗೆ ಹೊಸದಾಗಿ ಕೆಳ ಜೇಷ್ಠತೆಯಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು(ಗ್ರೇಡ್-1)/ಕಿರಿಯ ಅಭಿಯಂತರರು ಹುದ್ದೆಯಿಂದ (ಸಂಬಂಧಿತ ಹುದ್ದೆಯಿಂದ) ಕೈ ಬಿಟ್ಟು, ಸದರಿ ಹುದ್ದೆಗಳಿಗೆ ಸ್ವ-ಇಚ್ಛಾ ಲಿಖಿತ ಹೇಳಿಕೆಯನ್ನು ನೀಡಿರುವ/ನೀಡದೇ ಇರುವ ಅಭ್ಯರ್ಥಿಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು(ಗ್ರೇಡ್-1)/ಕಿರಿಯ ಅಭಿಯಂತರರು ಹುದ್ದೆಗೆ ಪರಿಗಣಿಸಲಾಗುವುದು” ಎಂದು ಈ ಮೂಲಕ ತಿಳಿಸಿದೆ.

ಪ್ರೌಢಶಾಲೆಗಳಲ್ಲಿ ಖಾಲಿ ಇರುವ 5120 ಬೋಧಕ ಹುದ್ದೆಗಳ ಭರ್ತಿಗೆ ಅನುಮತಿ| ಅನುದಾನಿತ ಶಾಲೆಗಳಲ್ಲಿ ನೇಮಕಾತಿ ಆರಂಭ

OFFICIAL LINKS:

Notice/ ನೋಟಿಸ್

Website/ ಜಾಲತಾಣ


Click to Share

3 thoughts on “KPSC RDWSD & PWD ಇಲಾಖೆಯ ನೇಮಕಾತಿ: AE & JE ಹುದ್ದೆಗಳ ನೇಮಕಾತಿ ಕುರಿತಾದ ಮಹತ್ವದ ಪ್ರಕಟಣೆ”

  1. Pingback: PMBI ನೇಮಕಾತಿ ಅಧಿಸೂಚನೆ ಪ್ರಕಟ: ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ- PMBI Recruitment 2023 - edutechkannada.com

  2. Pingback: ಕರ್ನಾಟಕ ಕೃಷಿ ವಿವಿಯಲ್ಲಿ ಫಿಲ್ಡ್ ಅಸಿಸ್ಟೆಂಟ್ & ಸಮಾಲೋಚಕ & ಹೆಲ್ಪರ್ ಹುದ್ದೆಗಳ ಭರ್ತಿ- Karnataka Agriculture University Jobs 2023 -

Leave a Comment

Your email address will not be published. Required fields are marked *

Scroll to Top