ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ 3445 ಗುಮಾಸ್ತ ಹುದ್ದೆಗಳಿಗೆ ಪಿಯುಸಿ ಆದವರಿಂದ ಅರ್ಜಿ ಆಹ್ವಾನ: RRB Clerk Recruitment 2024

Click to Share

ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ 3445 ಗುಮಾಸ್ತ ಹುದ್ದೆಗಳಿಗೆ ಪಿಯುಸಿ ಆದವರಿಂದ ಅರ್ಜಿ ಆಹ್ವಾನ: RRB Clerk Recruitment 2024

ಕೇಂದ್ರ ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಇದರಲ್ಲಿ  ಖಾಲಿ ಇರುವ ಜೂನಿಯರ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್  ಸೇರಿದಂತೆ ಒಟ್ಟು 3445 ಹುದ್ದೆಗಳ ಇಲಾಖಾ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಅರ್ಜಿ ಸಲ್ಲಿಸಲು 20-10-2024 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಕೂಡಲೇ ಆನ್ಲೈನ್  ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

ಭಾರತೀಯ ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ ರೂ. 31000/-

ಹುದ್ದೆಗಳ ವಿವರ:

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಕಮರ್ಶಿಯಲ್ ಕಮ್ ಟಿಕೆಟ್ ಕ್ಲರ್ಕ್ 3022
ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್ 361
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ 990
ಟ್ರೈನ್ಸ್ ಕ್ಲರ್ಕ್ 72
ಒಟ್ಟು ಹುದ್ದೆಗಳು 3445

ವೇತನ ಶ್ರೇಣಿ:

ಹುದ್ದೆಯ ಹೆಸರು ವೇತನ
ಕಮರ್ಶಿಯಲ್ ಕಮ್ ಟಿಕೆಟ್ ಕ್ಲರ್ಕ್ ರೂ. 21700
ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್ ರೂ. 19900
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ರೂ. 19900
ಟ್ರೈನ್ಸ್ ಕ್ಲರ್ಕ್ ರೂ. 19900

ಮೂಲವೇತನದ ಜೊತೆಗೆ ಡಿಎ, ಎಚ್.ಆರ್.ಎ & ಇನ್ನಿತರ ಸೌಲಭ್ಯಗಳು ದೊರೆಯಲಿವೆ.

 

ಶೈಕ್ಷಣಿಕ ಅರ್ಹತೆಗಳು:

ಕಮರ್ಶಿಯಲ್ ಕಮ್ ಟಿಕೆಟ್ ಕ್ಲರ್ಕ್:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ ಪಿಯುಸಿ ಮುಗಿಸಿರಬೇಕು.

ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ ಪಿಯುಸಿ ಮುಗಿಸಿರಬೇಕು ಹಾಗೂ ಇಂಗ್ಲಿಷ್ / ಹಿಂದಿಯಲ್ಲಿ ಟೈಪಿಂಗ್ ಗೊತ್ತಿರಬೇಕು.

ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ ಪಿಯುಸಿ ಮುಗಿಸಿರಬೇಕು. ಇಂಗ್ಲಿಷ್ / ಹಿಂದಿಯಲ್ಲಿ ಟೈಪಿಂಗ್ ಗೊತ್ತಿರಬೇಕು.

ಟ್ರೈನ್ಸ್ ಕ್ಲರ್ಕ್:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ ಪಿಯುಸಿ ಮುಗಿಸಿರಬೇಕು.

ಅರ್ಜಿ ಶುಲ್ಕ  :

ಪ.ಜಾ/ ಪ.ಪಂ/ EWS/ ಅಲ್ಪಸಂಖ್ಯಾತ/ ಮಾಜಿ ಸೈನಿಕ/ ಮಹಿಳೆ: ರೂ. 250

ಸಾಮಾನ್ಯ/ OBC ಅಭ್ಯರ್ಥಿಗಳಿಗೆ ರೂ. 500/-

ವಯೋಮಿತಿ/ Age limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು &  33 ವರ್ಷವನ್ನು ಮೀರಿರಬಾರದು.

 ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

ಆಯ್ಕೆವಿಧಾನ:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ

 ಅರ್ಜಿ ಹಾಕುವ ವಿಧಾನ:

ಆಸಕ್ತರು ಅರ್ಜಿಗಳನ್ನು ದಿನಾಂಕ 20.09.2024 ರಿಂದ 20.10.2024 ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು RRB ಯ ಅಧಿಕೃತ ವೆಬ್ಸೈಟ್  ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಕರ್ನಾಟಕ ಡಾ. ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 42000/-

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 21-09-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-10-2024

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply Online

ಜಾಲತಾಣ/ Website


Click to Share

1 thought on “ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ 3445 ಗುಮಾಸ್ತ ಹುದ್ದೆಗಳಿಗೆ ಪಿಯುಸಿ ಆದವರಿಂದ ಅರ್ಜಿ ಆಹ್ವಾನ: RRB Clerk Recruitment 2024”

  1. Pingback: ಬೆಂಗಳೂರು ರೈಲ್ ನಲ್ಲಿ ಖಾಲಿ ಇರುವ 33 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ ರೂ. 100000/- BMRCL 33 vacancies Jobs 2024 - EduTech Kannada

Leave a Comment

Your email address will not be published. Required fields are marked *

Scroll to Top