ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ದೀನದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಕೌಶಲ್ಯ ಮಿಶನ್ ಇಲ್ಲಿ ಕಾರ್ಯ ನಿರ್ವಹಿಸಲು ಮಲ್ಟಿ ಟಾಸ್ಕಿಂಗ್ ಆಫೀಷಿಯಲ್ಸ್ ಹುದ್ದೆಗಳ ತಾತ್ಕಾಲಿಕ ಭರ್ತಿಗೆ ಇಮೇಲ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಇಮೇಲ್ ಮೂಲಕ ಅರ್ಜಿ ಸಲ್ಲಿಸಲು 31-12-2024 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಇಮೇಲ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯ ಮಿಷನ್ ನಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಇಲಾಖೆ/ ಸಂಸ್ಥೆ: ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯ
ಹುದ್ದೆಗಳ ಹೆಸರು: ಮಲ್ಟಿ ಟಾಸ್ಕಿಂಗ್ ಆಫೀಷಿಯಲ್ಸ್
ಹುದ್ದೆಗಳ ಸಂಖ್ಯೆ- 01
ಕೆಲಸದ ಸ್ಥಳ: ದಕ್ಷಿಣ ಕನ್ನಡ
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಮಲ್ಟಿ ಟಾಸ್ಕಿಂಗ್ ಆಫೀಷಿಯಲ್ಸ್ | 01 |
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯದಿಂದ ಮಾಸಿಕ ಕ್ರೂಢಿಕೃತ ರೂ. 25000-30000 ವೇತನ ನೀಡಲಾಗುತ್ತದೆ.
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ರೆಗ್ಯೂಲರ್ ಪದವಿ ಮುಗಿಸಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ 03 ವರ್ಷಗಳ ಅನುಭವ ಹೊಂದಿರಬೇಕು.
ಅಭ್ಯರ್ಥಿಗಳು ಕನಿಷ್ಟ 21 ವರ್ಷ ಪೂರೈಸಿರಬೇಕು & ಗರಿಷ್ಟ 45 ವರ್ಷದವರೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ವಿಧಾನ / Selection Method
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ / ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ/ Application Submission
ಅರ್ಹ & ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ರೂಪದಲ್ಲಿ ದಿನಾಂಕ 30-12-2024 ರ ಒಳಗಾಗಿ skillmnglr@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು/ Important Dates
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 31-12-2024