ಹತ್ತನೇ, ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ರೂ. 30000/- ವಿದ್ಯಾರ್ಥಿ ವೇತನ: Ajim Premji Scholarship for students 2025

WhatsApp Group Join Now
Telegram Group Join Now
Click to Share

ಹತ್ತನೇ, ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ರೂ. 30000/- ವಿದ್ಯಾರ್ಥಿ ವೇತನ: Ajim Premji Scholarship for students 2025

ಹತ್ತನೇ, ಪಿಯುಸಿ ಮುಗಿಸಿದ ಅಭ್ಯರ್ಥಿಗಳು ಮುಂದಿನ ಉನ್ನತಾ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರೇ ವಾರ್ಷಿಕ 30000/- ದಷ್ಟು ವಿದ್ಯಾರ್ಥಿ ವೇತನ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಇದು ಪ್ರತಿಷ್ಟಿತ ಅಜೀಂ ಪ್ರೇಮ್ ಜಿ ಫೌಂಡೇಶನ್ ನಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಹತ್ತನೇ, ಪಿಯುಸಿ ಮುಗಿಸಿ ಉನ್ನತಾ ವಿದ್ಯಾಭ್ಯಾಸಕ್ಕೆ ದಾಖಲು ಮಾಡಿದ್ದರೇ ಮಾತ್ರ ಅಂತಹ ವಿದ್ಯಾರ್ಥಿನಿಯರಿಗೆ ವಾರ್ಷಿಕ 30000/- ದವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಸೆಪ್ಟಂಬರ್ ತಿಂಗಳಿನಿಂದ ಅನುವು ಮಾಡಿಕೊಡಲಾಗುತ್ತದೆ.

ಅಜೀಂ ಫ್ರೆಮ್ ಜಿ ಫೌಂಡೆಶನ್ ಬಹಳ ವರ್ಷಗಳಿಂದ ಅನುದಾನಗಳ ಮೂಲಕ ಪಾಲುದಾರರು ಮತ್ತು ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಇದು ಪ್ರಸ್ತುತ ಲಿಂಗ ನ್ಯಾಯ, ಸಾಂವಿಧಾನಿಕ ಮೌಲ್ಯಗಳು, ಶಿಕ್ಷಣ, ವಿದ್ಯಾರ್ಥಿವೇತನ, ತರಬೇತಿ, ಅಂಗವೈಕಲ್ಯ ಮತ್ತು ಆಡಳಿತದಂತಹ ಕ್ಷೇತ್ರಗಳಲ್ಲಿ 1,150 ಪ್ರಕಾರದ ಲಾಭರಹಿತ ಮತ್ತು CSO ಗಳ ಕಾರ್ಯವನ್ನು ನಿರ್ವಹಿಸುತ್ತಿದೆ.

ಮೆಸ್ಕಾಂ ನಿಂದ ಕಿರಿಯ ಪವರ್‌ಮ್ಯಾನ್ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಬಿಡುಗಡೆ

ಅಜೀಂ ಫ್ರೇಮ್ ಜಿ ಫೌಂಡೇಶನ್ ನಿಂದ ಕರ್ನಾಟಕ ಸೇರಿ ದೇಶದ 18 ರಾಜ್ಯಗಳ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ನೀಡಲು 2250 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.  ಮೂರು ವರ್ಷಗಳವರೆಗೆ ವಿದ್ಯಾರ್ಥಿನಿಯರಿಗೆ ಇದೇ ಹಣದಿಂದ ವಿದ್ಯಾರ್ಥಿವೇತನ ನೀಡಲಾಗುತ್ತದೆ,” ಎಂದು ಫೌಂಡೇಷನ್ ದ ಸಿಇಒ ಅನುರಾಗ್ ಬೆಹರ್ ಮಾಹಿತಿ ನೀಡಿದ್ದಾರೆ. ಹತ್ತನೇ ತರಗತಿ ಹಾಗೂ ಪಿಯುಸಿ ಮುಗಿಸಿದ ವಿದ್ಯಾರ್ಥಿನಿಯರು, ಮುಂದಿನ ಹಂತದ ಶಿಕ್ಷಣಕ್ಕಾಗಿ ಪ್ರವೇಶಾತಿ ಪಡೆದಿದ್ದರೆ ಅವರಿಗೆ ವರ್ಷಕ್ಕೆ 30 ಸಾವಿರ ರೂ. ವಿದ್ಯಾರ್ಥಿವೇತನವನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ.

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳ ಹುದ್ದೆಗಳ ಕೀ ಉತ್ತರಗಳು ಬಿಡುಗಡೆ: Key Answer of Various Posts released from KPSC

ಸೆಪ್ಟೆಂಬರ್ 1ರಿಂದ ಸ್ಕಾಲರ್ ಶಿಪ್ಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಅಜೀಂ ಪ್ರೇಮ್ ಜಿ ಫೌಂಡೇಷನ್ ವೆಬ್‌ಸೈಟ್ ಮೂಲಕ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ. ದೇಶದ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಅಜೀಂ ಪ್ರೇಮ್ಜಿ ಫೌಂಡೇಷನ್ ವತಿಯಿಂದ ಪ್ರತಿ ವರ್ಷ ವಿದ್ಯಾರ್ಥಿವೇತನ ನೀಡಲಾಗುತ್ತದೆ.


Click to Share
WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top