ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್- 4% ತುಟ್ಟಿಭತ್ಯೆ (DA) ಹೆಚ್ಚಳ: ಜುಲೈ 1, 2024 ರಿಂದ ಅರಿಯರ್ಸ್- Central Govt. Employees DA Hike July 2024
ಸ್ನೇಹಿತರೇ ನಮಸ್ತೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ಘೋಷಣೆಯಾಗಿದೆ. 3% ತುಟ್ಟಿಭತ್ಯೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದೆ, ಇನ್ನೆರಡು ದಿನಗಳಲ್ಲಿ ಇದರ ಅಧಿಕೃತ ಘೋಷಣೆ ಹೊರಬೀಳಲಿದೆ. ಇದರಿಂದ ಕೇಂದ್ರ ಸರ್ಕಾರದ 49.18 ಲಕ್ಷ ನೌಕರರಿಗೆ & 64.89 ಪಿಂಚಣಿದಾರರಿಗೆ ತಮ್ಮ ವೇತನದಲ್ಲಿ ಹೆಚ್ಚಳವಾಗಲಿದೆ.
ರಾಚವಿವಿ ಬೆಳಗಾವಿಯಲ್ಲಿ ಖಾಲಿ ಇರುವ 51 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 32000/ –
ಕೇಂದ್ರ ಸರ್ಕಾರ ಪ್ರತಿ ವರ್ಷ ಜನೆವರಿ & ಜುಲೈ ನಲ್ಲಿ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುತ್ತದೆ. ಆದರೆ ಕೆಲವೊಮ್ಮೆ ಘೋಷಣೆ ತಡವಾದರೂ ನೌಕರರಿಗೆ ಅರಿಯರ್ಸ್ ನೀಡಲಾಗುತ್ತದೆ. ಪ್ರಸ್ತುತ ಜುಲೈ 1, 2024 ರಿಂದ ತುಟ್ಟಿಭತ್ಯೆ ಹೆಚ್ಚಳದ ಲಾಭ ದೊರಕುತ್ತದೆ. ಈ ಹೆಚ್ಚಳದೊಂದಿಗೆ ತುಟ್ಟಿಭತ್ಯೆ ಶೇಕಡ 50% ನಿಂದ 53% ಕ್ಕೆ ಹೆಚ್ಚಳವಾಗುತ್ತದೆ ಹಾಗೇಯೆ ಜುಲೈ 1 ರಿಂದ ಹೆಚ್ಚಳದ ಅರಿಯರ್ಸ್ ಅನ್ನು ನೌಕರರಿಗೆ ನೀಡಲಾಗುತ್ತದೆ.
ರಾಜ್ಯ ಸರ್ಕಾರಿ ನೌಕರರಿಗೆ ಡಿಎ ಘೋಷಣೆ:
ಸಾಮಾನ್ಯವಾಗಿ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಘೋಷಣೆ ಮಾಡಿದ ನಂತರ ಕರ್ನಾಟಕ ಸರ್ಕಾರ ಘೋಷಣೆ ಮಾಡುವುದು ವಾಡಿಕೆಯಾಗಿರುತ್ತದೆ. ಕೇಂದ್ರ ಸರ್ಕಾರ ನೀಡಿರುವ ಶೇಕಡವಾರು ಡಿಎ ಹೆಚ್ಚಳದಷ್ಟು ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಡಿಎ ಯನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಶೀಘ್ರವೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ.
ಕರ್ನಾಟಕ ಮಹಿಳಾ & ಮಕ್ಕಳ ಇಲಾಖೆಯಲ್ಲಿ ಖಾಲಿ ಇರುವ 1170 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಡಿಎ ಹೆಚ್ಚಳದ ಮಾನದಂಡಗಳೇನು?
ಕೇಂದ್ರ ಸರ್ಕಾರವು ತುಟ್ಟಿಭತ್ಯೆ ನೀಡುವಾಗ ವಿವಿಧ ಮಾನದಂಡಗಳನ್ವಯ ಲೆಕ್ಕ ಹಾಕಲಾಗುತ್ತದೆ. ಸಾಮಾನ್ಯವಾಗಿ ಕೈಗಾರಿಕಾ ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI- IW) ಆಧಾರದ ಮೇಲೆ ತುಟ್ಟಿಭತ್ಯೆ ನಿರ್ಧಾರ ಮಾಡಲಾಗುತ್ತದೆ. ಆ ಪ್ರಕಾರವಾಗಿ ಶೇ. 3% ನಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಿದೆ.
ಬೆಂಗಳೂರು ರೈಲ್ವೇ ನಲ್ಲಿ ಖಾಲಿ ಇರುವ 33 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ ರೂ. 100000/-
ಕನಿಷ್ಟ ಎಷ್ಟು ವೇತನ ಹೆಚ್ಚಳ:
ತುಟ್ಟಿಭತ್ಯೆಯನ್ನು ಮೂಲವೇತನಕ್ಕೆ ಲೆಕ್ಕ ಹಾಕಲಾಗುತ್ತದೆ. ಒಬ್ಬ ನೌಕರ ಪ್ರತಿ ತಿಂಗಳ ಮೂಲವೇತನ ರೂ. 20000/- ಇದ್ದರೇ, ಆತನ ಡಿಎ ಹೆಚ್ಚಳದ ಮೊತ್ತ ಪ್ರತಿ ತಿಂಗಳು ರೂ. 600 ಆಗಿರುತ್ತದೆ.
ಸ್ನೇಹಿತರೇ ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಬಾವಿಸುತ್ತೇವೆ. ಇದೇ ರೀತಿಯ ನಿರಂತರ ಅಪ್ಡೇಟ್ಸ್ ಗಳಿಗೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿಕೊಳ್ಳಿ.