ಧಾರವಾಡದ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ- Cooperative Bank Dharwad Recruitment Notification 2023
ರಡ್ಡಿ ಸಹಕಾರ ಬ್ಯಾಂಕ್ ನಿಂದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಪ್ರಕಟಣೆ ಹೊರಬಿದ್ದಿದೆ. ರಡ್ಡಿ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ & ಜವಾನ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 22 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
Raddi Cooperative Bank ನಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ/ Post Details:
ಕಿರಿಯ ಸಹಾಯಕ/ Junior Assistant- 24 ಹುದ್ದೆಗಳು |
ಜವಾನ/ Peon- 10 ಹುದ್ದೆಗಳು |
ಒಟ್ಟು ಹುದ್ದೆಗಳು- 34 |
ವೇತನ/ Salary
ಕಿರಿಯ ಸಹಾಯಕ/ Junior Assistant- ರೂ. 17650-32000 |
ಜವಾನ/ Peon- 12500-24000 |
ಸಹಕಾರ ಬ್ಯಾಂಕ್ ನಿಯಮಾವಳಿಗಳನ್ವಯ ಮೂಲವೇತನದ ಜೊತೆಗೆ ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಕಿರಿಯ ಸಹಾಯಕ/ Junior Assistant:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಮುಗಿಸಿರಬೇಕು & ಹೈಯರ್ ಡಿಪ್ಲೋಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ಕೋರ್ಸ್ ಮುಗಿಸಿರಬೇಕು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವ ಹೊಂದಿರುವವರಿಗೆ ಆಧ್ಯತೆ ನೀಡಲಾಗುತ್ತದೆ.
ಸೇವಕ/ ಜವಾನ:
ಮಾನ್ಯತೆ ಪಡೆದ ಸಂಸ್ಥೆಯಿಂದ ಹತ್ತನೇ ತರಗತಿ ಉತ್ತೀರ್ಣ ಹೊಂದಿರಬೇಕು.
ಅರ್ಜಿ ಶುಲ್ಕ/ Application Fees:
ಕಿರಿಯ ಸಹಾಯಕ ಹುದ್ದೆಗಳು: ರೂ. 1000/-
ಸೇವಕ ಹುದ್ದೆಗಳು: ರೂ. 500/-
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೇಡಿಟ್/ ಡೆಬಿಟ್ ಕಾರ್ಡ್ ಮುಖಾಂತರ ಪಾವತಿ ಮಾಡಬಹುದು.
ವಯೋಮಿತಿ/ Age limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ & ಸಂದರ್ಶನ ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/ Application Submission Method:
ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 26.07.2023 ರಿಂದ 22.08.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಬ್ಯಾಂಕ್ ನ ವೆಬ್ ಸೈಟ್ www.raddibank.com ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 26-07-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:22-08-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 22-08-2023
Important Links/ ಪ್ರಮುಖ ಲಿಂಕುಗಳು:
Pingback: KSOU ನಲ್ಲಿ ಖಾಲಿ ಇರುವ SDA, FDA ಹುದ್ದೆಗಳ ನೇರ ಭರ್ತಿಗೆ ಅರ್ಜಿ ಆಹ್ವಾನ- KSOU Recruitment 2023 - edutechkannada.com
Pingback: KEA ಯಿಂದ 2023 ನೇ ಸಾಲಿನ KSET ಪರೀಕ್ಷೆಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ- KEA KSET Exam 2023 - edutechkannada.com