ಕೃಷಿ ಇಲಾಖೆಯಿಂದ ಒಂದ ಸಾವಿರ AAO ಹುದ್ದೆಗಳ ಭರ್ತಿ: Dept of Agriculture AAO Recruitment 2023
ಕೃಷಿ ಇಲಾಖೆಯಿಂದ ಶೀಘ್ರದಲ್ಲಿಯೇ 1000 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದ ಕೃಷಿ ಸಚಿವ ಎನ್ ಚೆಲುವರಾಯಸ್ವಾಮೀ ತಿಳಿಸಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಕೃಷಿ ಇಲಾಖೆ ಕಾರ್ಯ ನಿರ್ವಹಣೆ ಮಾಡಲು ಸಿಬ್ಬಂದಿಗಳ ಕೊರತೆ ಇದೆ. ಅದನ್ನು ನೀಗಿಸಲು ನೇಮಕಾತಿಯನ್ನು ತ್ವರಿತವಾಗಿ ಮಾಡಿಕೊಳ್ಳಬೇಕಾಗಿದೆ.
ಈ ನೇಮಕಾತಿಗಾಗಿ ಸಾವಿರಾರು ಅಭ್ಯರ್ಥಿಗಳು ಎದುರು ನೋಡುತ್ತಿದ್ದಾರೆ, ಅವರಿಗೆಲ್ಲಾ ರಾಜ್ಯ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, ಶೀಘ್ರದಲ್ಲಿಯೇ ಈ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ ಎಂಬ ಅಂಶವನ್ನು ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ 20000 ಶಿಕ್ಷಕರ ಹೊಸ ನೇಮಕಾತಿಗೆ ನಿರ್ದಾರ: Primary & High School Teacher Recruitment 2023
ಗ್ರಾಮೀಣ ಪ್ರದೇಶದ ಹಂತದಲ್ಲಿ 368 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಈ ಹಿಂದೆ ಕೆಪಿಎಸ್ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಆದರೆ ಮೀಸಲಾತಿಯ ಕುರಿತು ಉದ್ಭವವಾದ ಹೊಸ ಗೊಂದಲಗಳನ್ನು ಪರಿಶೀಲಿಸಿ ಕಳುಹಿಸಲು ಕೆಪಿಎಸ್ಸಿಯಿಂದ ಪ್ರಸ್ತಾವನೆ ವಾಪಸ್ಸು ಹಿಂದಿರುಗಿಸಲಾಯಿತು.
ಪ್ರಸ್ತುತ 2000 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕೃಷಿ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಅನುಮೋದನೆಗೊಂಡ ನಂತರ ಮೊದಲನೇ ಹಂತದಲ್ಲಿ 1000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಈ ನೇಮಕಾತಿಗೆ ಬಿಎಸ್ಸಿ ಕೃಷಿ ಪದವಿ ಮುಗಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಕೆಪಿಎಸ್ಸಿಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂಬಂಧಿಸಿದ ವಿದ್ಯಾರ್ಹತೆ ಪೂರ್ಣಗೊಳಿಸಿದವರು ಸಿದ್ದತೆಯನ್ನು ಮಾಡಿಕೊಳ್ಳಿ, ಯಾವುದೇ ಕ್ಷಣದಲ್ಲಾದರೂ ಇದರ ಅಧಿಸೂಚನೆ ಹೊರಬೀಳಬಹುದಾಗಿದೆ.
Pingback: ಏಕಲವ್ಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 2570 ಪಿಜಿಟಿ ಶಿಕ್ಷಕರು & ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: NEST Teacher Recruit