ಏಕಲವ್ಯ ಮಾದರಿ ಶಾಲೆಗಳ 10,391 ಹುದ್ದೆಗಳ ನೇಮಕ: ಬೋಧಕ & ಬೋಧಕೇತರ ಹುದ್ದೆಗಳ ನೇಮಕಾತಿ ಕುರಿತು ಅಪ್ಡೇಟ್: EMRS Admit Card Updates
ದೇಶದ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿಯ 10,000 ಕ್ಕೂ ಅಧಿಕ ವಿವಿಧ ಬೋಧಕ & ಬೋಧಕೇತರ ಹುದ್ದೆಗಳ ಭರ್ತಿಗೆ ಕಳೆದ 2023 ರ ಜುಲೈ ಹಾಗೂ ಆಗಸ್ಟ್ ನಲ್ಲಿ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿತ್ತು. ಸದರಿ ಹುದ್ದೆಗಳ ಪರೀಕ್ಷೆಗೆ ಪ್ರವೇಶ ಪತ್ರ (Admit Card) ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ.
KEA ಯಿಂದ 2023 ನೇ ಸಾಲಿನ KSET ಪರೀಕ್ಷೆಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ- KEA KSET Exam Notification 2023
EMRS ನೇಮಕಾತಿ 2023:
ದೇಶದಾದ್ಯಂತ ಬುಡಕಟ್ಟು ಜನಾಂಗಗಳ ವಿದ್ಯಾರ್ಥಿಗಳಿಗಾಗಿ ಇರುವ ಏಕಲವ್ಯ ಮಾದರಿ ವಸತಿ ಶಾಲೆಗಳ 10,000 ಕ್ಕೂ ಹೆಚ್ಚು ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಲೇಟೆಸ್ಟ್ ಅಪ್‌ಡೇಟ್ ದೊರೆತಿದೆ. ಇಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿಗಳನ್ನು ಕರೆಯಲಾಗಿತ್ತು. ಅದರಲ್ಲಿ 6329 ಬೋಧಕ ಹುದ್ದೆಗಳು ಹಾಗೂ 4,062 ಬೋಧಕೇತರ ಹುದ್ದೆಗಳು ಇದ್ದವು. ಕೆಲ ದಿನಗಳ ಹಿಂದೆ ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿ ಸಂಬಂಧ ಅಭ್ಯರ್ಥಿಗಳ ಆಯ್ಕೆಗೆ ನಡೆಸುವ ಪರೀಕ್ಷೆಗೆ ಪ್ರವೇಶ ಪತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದಿದೆ.
EMRS ನೇಮಕಾತಿ 2023: ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ?
ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಗ್ರೂಪ್ ಸಿ & ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಹುದ್ದೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು ನ್ಯಾಷನಲ್ ಎಜುಕೇಷನ್ ಸೊಸೈಟಿ ಫಾರ್ ಟ್ರೈಬಲ್ ಸ್ಟೂಡೆಂಟ್ (NESTS) ವತಿಯಿಂದ ನಡೆಸುವ ನೇಮಕಾತಿ ಪರೀಕ್ಷೆಗೆ ಹಾಜರಾಗಬೇಕಿದ್ದು, ವೆಬ್‌ಸೈಟ್ https://emrs.tribal.gov.in ಗೆ ಭೇಟಿ ನೀಡಿ ಲಾಗಿನ್ ಆಗುವ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.
EMRS ನೇಮಕಾತಿ 2023- ಹುದ್ದೆಗಳ ವಿವರ ಈಗಿದೆ:
ಪ್ರಾಂಶುಪಾಲರು, ಪೋಸ್ಟ್ ಗ್ರಾಜುಯೇಟ್ ಟೀಚರ್, ಲೆಕ್ಕಿಗರು, ಸೀನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್, ಲ್ಯಾಬ್ ಟೆಕ್ನೀಷಿಯನ್ ಸೇರಿದಂತೆ ಒಟ್ಟು 4062 ಹುದ್ದೆಗಳಿಗೆ ಕಳೆದ ಜುಲೈ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿತ್ತು. ತರಬೇತಿ ಪಡೆದ ಪದವೀಧರ ಶಿಕ್ಷಕರು-TGT, ವಸತಿ ನಿಲಯ ಮೇಲ್ವಿಚಾರಕರು (ಪುರುಷ), ವಸತಿ ನಿಲಯ ಮೇಲ್ವಿಚಾರಕರು (ಮಹಿಳೆಯರು) ಸೇರಿ ಒಟ್ಟು 6329 ಹುದ್ದೆಗಳಿಗೆ ಆಗಸ್ಟ್ ತಿಂಗಳಲ್ಲಿ ಅಧಿಸೂಚಿಸಿ ಅರ್ಜಿ ಸ್ವೀಕಾರ ಮಾಡಲಾಗಿತ್ತು.
ರಾಜ್ಯ ಆರೋಗ್ಯ ಇಲಾಖೆಯಲ್ಲಿನ KSAPS ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
EMRS ನೇಮಕಾತಿ 2023 :ವೇತನ ಶ್ರೇಣಿ ವಿವರ
ತರಬೇತಿ ಪಡೆದ ಪದವೀಧರ ಶಿಕ್ಷಕರು: Rs.44,900- 1,42,400.
ವಸತಿ ನಿಲಯ ಮೇಲ್ವಿಚಾರಕರು : Rs.29,200- 92,300.
ಇತರೆ ಬೋಧಕೇತರ ಹುದ್ದೆಗಳಿಗೆ : Rs.30000-70000.
Pingback: ಪಿಯುಸಿ ಮುಗಿದವರಿಂದ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳಿಗೆ ಅರ್ಜಿ ಆಹ್ವಾನ: KSS College SDA Recruitment 2023 - edutechkannada.com