ಆರೋಗ್ಯ ಇಲಾಖೆಯ ನೌಕರರಿಗೆ ESR ಕುರಿತು ಮಹತ್ವದ ಸೂಚನೆ- Important Circular for Health Department Employees Regarding ESR Update

WhatsApp Group Join Now
Telegram Group Join Now
Click to Share

ಆರೋಗ್ಯ ಇಲಾಖೆಯ ನೌಕರರಿಗೆ ESR ಕುರಿತು ಮಹತ್ವದ ಸೂಚನೆ- Important Circular for Health Department Employees Regarding ESR Update

ಸ್ನೇಹಿತರೇ ನೀವು ರಾಜ್ಯ ಸರ್ಕಾರಿ ನೌಕರರಾಗಿದ್ದರೇ ಈ ಲೇಖನವನ್ನು ಗಮನವಿಟ್ಟು ಓದಿ.  ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ಸೇವಾ ವಿವರಗಳನ್ನು ಹೆಚ್.ಆ‌ರ್.ಎಂ.ಎಸ್ ತಂತ್ರಾಂಶದ ವಿದ್ಯುನ್ಮಾನ ಸೇವಾ ವಹಿಯ (Electronic Service Register-ESR) ಸ್ವರೂಪದಲ್ಲಿ ದಾಖಲಿಸಿ ನಿರ್ವಹಿಸುವ ಕುರಿತು ದಿನಾಂಕ 09-05-2025ರಂದು ಆಯುಕ್ತರು, ಆರೋಗ್ಯ & ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ವತಿಯಿಂದ ಸುತ್ತೋಲೆಯನ್ನು ಹೊರಡಿಸಲಾಗಿದೆ.

ರಾಜ್ಯ ಸರ್ಕಾರದ ಸೇವೆಯಲ್ಲಿರುವ ಎಲ್ಲಾ Group B (Non Gazetted)/Group C/Group D ಅಧಿಕಾರಿ/ಸಿಬ್ಬಂದಿಗಳ ಸೇವಾ ವಹಿಯನ್ನು ಹೆಚ್.ಆರ್.ಎಂ.ಎಸ್-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿಯ (Electronic Service Register-ESR) ನಲ್ಲಿಯೇ ಅನುಷ್ಠಾನಗೊಳಿಸಲು ಎಲ್ಲ ಹಣ ಸೆಳೆಯುವ ಅಧಿಕಾರಿಗಳು (DDO) ಗಳಿಗೆನಿರ್ದೇಶನ ನೀಡಲಾಗಿದೆ.

ಏನೀದು  ESR?

ಹೆಚ್.ಆರ್.ಎಂ.ಎಸ್-2.0 ರಲ್ಲಿ ಅನುಷ್ಠಾನಗೊಳಿಸುವ ಸಂಬಂಧ, ವಿದ್ಯುನ್ಮಾನ ಸೇವಾ ವಹಿಯನ್ನು ಸಿದ್ಧಪಡಿಸಲಾಗಿದೆ. ಈ ತಂತ್ರಾಂಶವು ನೌಕರಸ್ನೇಹಿಯಾಗಿದೆ. ನಿರ್ವಹಣೆಯೂ ಬಹಳ ಸರಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೇವೆಗೆ ನೇಮಕಗೊಂಡಿರುವ ಎಲ್ಲಾ ಅಧಿಕಾರಿ/ನೌಕರರ ಸೇವಾ ವಿವರಗಳ ಮಾಹಿತಿಯು ಈಗಾಗಲೇ ಹೆಚ್.ಆರ್.ಎಂ.ಎಸ್-1.0 ತಂತ್ರಾಂಶದಲ್ಲಿ ಲಭ್ಯವಿದ್ದು, ಸದರಿ ಮಾಹಿತಿಯನ್ನು ವಿದ್ಯುನ್ಮಾನ ಸೇವಾ ವಹಿಗೆ (ESR) ವರ್ಗಾಯಿಸಲು ಕೂಡ ಈ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಸಿಬ್ಬಂದಿಗಳ ಸೇವಾ ವಹಿಗಳನ್ನು ESR ಗೆ ಬದಲಾಯಿಸಿ ಮುಂದೆ ESR ನಲ್ಲಿಯೇ ಮುಂದುವರೆಸಲಾಗುತ್ತದೆ.

ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರು & ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿಲ್ಲದಿರುವ ಕಾರಣ ಹೆಚ್.ಆರ್.ಎಂ.ಎಸ್-1.0 ತಂತ್ರಾಂಶದಲ್ಲಿ ಲಭ್ಯವಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ, ಅವಶ್ಯಕತೆ ಇದ್ದಲ್ಲಿ ಸರಿಪಡಿಸುವಂತೆ ಹಾಗೂ ಸೇರಿಸಲು ಸೂಚಿಸಲಾಗಿದೆ.

ಎಲ್ಲಾ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ESR ಗೆ ವರ್ಗಾಯಿಸುವ ಪೂರ್ಣ ಜವಾಬ್ದಾರಿಯು Drawing and Disbursing Officer ಆಗಿರುತ್ತದೆ. ESR ಸುಗಮ ಮತ್ತು ಪರಿಣಾಮಕಾರಿ ಅನುಷ್ಠಾನ ಉದ್ದೇಶಕ್ಕಾಗಿ ಎಲ್ಲಾ Drawing and Disbursing Officers ಅಧಿಕಾರಿಗಳಿಗೆ ಕೆಳಕಂಡಂತೆ ತರಬೇತಿಯನ್ನು ಆಯೋಜಿಸಲಾಗಿದೆ.

ಕರ್ನಾಟಕದ ಕಾರ್ಮಿಕರ ರಾಜ್ಯ ನಿಗಮದಲ್ಲಿ ಖಾಲಿ ಇರುವ ಹಿರಿಯ ನಿವಾಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ತರಬೇತಿ ವೇಳೆಯ ಮುಂಚೆ, virtual (ಆನ್‌ಲೈನ್) ಸಭೆಯ ಲಿಂಕ್ ಅನ್ನು ಎಲ್ಲರೊಂದಿಗೆ ಇ-ಮೇಲ್ ಮೂಲಕ ಹಂಚಿಕೊಳ್ಳಲಾಗುವುದು. ಎಲ್ಲಾ DDO ಗಳು ತರಬೇತಿಗೆ ಕಡ್ಡಾಯವಾಗಿ ಹಾಜರಿರತಕ್ಕದ್ದು. ತರಬೇತಿಯ ನಂತರ ಹದಿನೈದು ದಿವಸಗೊಳಗಾಗಿ ಎಲ್ಲಾ Group B (non-Gazetted), Group C ಮತ್ತು Group D ಅಧಿಕಾರಿ/ಸಿಬ್ಬಂದಿಗಳ ಸೇವಾ ವಿವರಗಳನ್ನು ESR ನಲ್ಲಿ ನಮೂದಿಸುವುದು. ಇಲ್ಲದಿದ್ದಲ್ಲಿ ಆಯಾ DDO ಅವರೇ ಹೊಣೆಗಾರರಾಗಿರುತ್ತಾರೆ.

ತರಬೇತಿಯ ವಿವರಗಳು:

ಪ್ರತಿ ಬುಧುವಾರ: ಬೆಳಗಾವಿ & ಕಲಬುರ್ಗಿ ವಿಭಾಗದ DDO ಗಳು

ಪ್ರತಿ ಗುರುವಾರ:  ಬೆಂಗಳೂರು & ಮಂಗಳೂರು ವಿಭಾಗಗಳ DDO ಗಳು

 

ಹೆಚ್ಚಿನ ಮಾಹಿತಿಗಾಗಿ ಇಮೇಲ್ sprogrammer-e2@karnataka.gov.in ಗೆ ಸಂಪರ್ಕಿಸುವುದು.


Click to Share
WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top