ಅಂಚೆ ಇಲಾಖೆಯಲ್ಲಿ ಖಾಲಿ ಇರುವ AE ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ ರೂ. 44900/- Indian Postal AE Recruitment 2024
ಭಾರತೀಯ ಅಂಚೆ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳನ್ನು ನಿಯೋಜನೆ ಮೂಲಕ ಭರ್ತಿ ಮಾಡಲು ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಇದರಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ನಿಗದಿತ ಅರ್ಜಿ ನಮೂನೆಯ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಅರ್ಜಿ ಸಲ್ಲಿಸಲು 10-11-2024 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು Speed Post/ Register Post ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
ಜಿಲ್ಲಾ ಕಾನೂನು ಪ್ರಾಧಿಕಾರದಲ್ಲಿ ಖಾಲಿ ಇರುವ ಕ್ಲರ್ಕ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Postal Department ಇಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಆಯುರ್ವೇದ ಮಹಾವಿದ್ಯಾಲಯದಲ್ಲಿ ಖಾಲಿ ಇರುವ SDA, ಸ್ಟಾಫ್ ನರ್ಸ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಹುದ್ದೆಗಳ ವಿವರ:
ಸಂಸ್ಥೆ: ಭಾರತೀಯ ಅಂಚೆ ಇಲಾಖೆ |
ಹುದ್ದೆಯ ಹೆಸರು: ಅಸಿಸ್ಟೆಂಟ್ ಇಂಜಿನಿಯರ್ |
ಹುದ್ದೆಗಳ ಸಂಖ್ಯೆ: 07 |
ಕೆಲಸದ ಸ್ಥಳ: ಚೆನೈ |
ವೇತನ ಶ್ರೇಣಿ:
ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಲೆವೆಲ್ 7 ರಂತೆ ವೇತನ ನಿಗದಿಪಡಿಸಲಾಗಿದೆ. ಮೂಲವೇತನ ರೂ. 44900-142400
ಶೈಕ್ಷಣಿಕ ಅರ್ಹತೆಗಳು:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ ಅಧಿಸೂಚನೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆ & ಅನುಭವವನ್ನು ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ಶುಲ್ಕ :
ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ವಯೋಮಿತಿ/ Age limit:
ವಯೋಮಿತಿ ನಿಗದಿಯಾಗಿಲ್ಲ
ಆಯ್ಕೆವಿಧಾನ:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಮೌಖಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ:
ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಫೋಟೊ, ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 10.11.2024 ರ ಒಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸಕ್ಕೆ ಸಲ್ಲಿಸುವುದು. ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.
ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಲ್ಲಿ ಖಾಲಿ ಇರುವ 108 ಆಫೀಸ್ ಅಸಿಸ್ಟೆಂಟ್ ನೇಮಕಾತಿಗೆ ಅಧಿಸೂಚನೆ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 26-09-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-11-2024
Important Links/ ಪ್ರಮುಖ ಲಿಂಕುಗಳು: