ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ 1940 ಹುದ್ದೆಗಳಿಗೆ ಕನ್ನಡಿಗರಿಂದ ಅರ್ಜಿ ಆಹ್ವಾನ : Karnataka Postal Circle Jobs 2024

Click to Share

ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ 1940 ಹುದ್ದೆಗಳಿಗೆ ಕನ್ನಡಿಗರಿಂದ ಅರ್ಜಿ ಆಹ್ವಾನ : Karnataka Postal Circle Jobs 2024

ಕರ್ನಾಟಕ ಅಂಚೆ ವೃತ್ತದಲ್ಲಿ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ  1940 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 05-08-2024 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು.

ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹಾಸ್ಟೆಲ್ ವಾರ್ಡನ್ ಹುದ್ದೆಗಳ ಭರ್ತಿಗೆ ಅಧಿಸೂಚನೆ: ವೇತನ ರೂ. 40000/-

ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ ಹುದ್ದೆಗಳ  ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ.

ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

KEA ಯಿಂದ 2024 ನೇ ಸಾಲಿನ KSET ಪರೀಕ್ಷೆಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

Post Details/ ಹುದ್ದೆಗಳ ವಿವರ:

ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕ್

ಒಟ್ಟು ಹುದ್ದೆಗಳು: 1940 Posts

ಪರಿಶಿಷ್ಟ ಜಾತಿ (SC) 264
ಪರಿಶಿಷ್ಟ ಪಂಗಡ (ST) 130
ಇತರೆ ಹಿಂದೂಳಿದ ವರ್ಗ (OBC) 446
ಆರ್ಥಿಕವಾಗಿ ಹಿಂದೂಳಿದವರು (EWS) 230
ಸಾಮಾನ್ಯ ವರ್ಗ (UR) 827
ಒಟ್ಟು ಹುದ್ದೆಗಳು 1940

ಜಿಲ್ಲಾವಾರು ಹುದ್ದೆಗಳ ವಿವರಗಳಿಗೆ ಕೆಳಗೆ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

 

ವೇತನ ಶ್ರೇಣಿ/ Salary Scale:

ಹುದ್ದೆಯ ಹೆಸರು ವೇತನ
ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) 12000-29380
ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ (ABPM) 10000-24470

 

 (ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಮೂಲವೇತನದ ಜೊತೆಗೆ DA/ HRA ಮುಂತಾದ ಸೌಲಭ್ಯಗಳು ದೊರೆಯತ್ತವೆ.)

 

ವಯೋಮಿತಿ/ Age limit (As on 05-08-2024)

ದಿನಾಂಕ 01-07-2023 ಕ್ಕೆ ಕನಿಷ್ಟ 18 ವರ್ಷ ತುಂಬಿರಬೇಕು ಗರಿಷ್ಟ 40 ವರ್ಷವನ್ನು ಮೀರುವಂತಿಲ್ಲ. 

ವಯೋಮಿತಿಯಲ್ಲಿ ಸಡಿಲಿಕೆ/ Age Relaxation:

SC, ST : 5 years

OBC : 3 years

PwBD: 10 years relaxed for their respective category

ವಿದ್ಯಾರ್ಹತೆ/ Educational Qualification: (As on 05-08-2024)

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ  ಬೋರ್ಡ್ ನಿಂದ 10ನೇ ತರಗತಿ ಅಥವಾ ತತ್ಸಮಾನ   ವಿದ್ಯಾರ್ಹತೆ ಹೊಂದಿರಬೇಕು.

ಕನ್ನಡ ಭಾಷೆಯಲ್ಲಿ ಓದಿರಬೇಕು.

ಕಂಪ್ಯೂಟರ್ ಜ್ಞಾನವಿರಬೇಕು.

ಅರ್ಜಿ ಶುಲ್ಕ/ Application fees:

ಸಾಮಾನ್ಯ, OBC & EWS ಅಭ್ಯರ್ಥಿಗಳಿಗೆ : ರೂ. 100/-

ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡ/ ಅಂಗವಿಕಲ ಅಭ್ಯರ್ಥಿಗಳಿಗೆ: & ಎಲ್ಲ ಮಹಿಳೆಯರಿಗೆ: ಅರ್ಜಿ ಶುಲ್ಕವಿಲ್ಲ

ಅರ್ಜಿ ಶುಲ್ಕವನ್ನು ONLINE ಮೂಲಕ ಪಾವತಿಸಬೇಕು.

 

ಆಯ್ಕೆವಿಧಾನ/ Selection Method:

ಹತ್ತನೇ ತರಗತಿಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 15.07.2024 ರಿಂದ 05.08.2024ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಅಂಚೆ ಇಲಾಖೆಯ    ವೆಬ್ ಸೈಟ್      ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 344 ಅಂಗನವಾಡಿ ಸಹಾಯಕಿ & ಕಾರ್ಯಕರ್ತೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕ/ Important Dates:

ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ 15-07-2024

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 05-08-2024

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

District wise Post Details

ಅರ್ಜಿ ಸಲ್ಲಿಸಿ/ Apply Online

ವೆಬ್ಸೈಟ್/ Website :


Click to Share

1 thought on “ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ 1940 ಹುದ್ದೆಗಳಿಗೆ ಕನ್ನಡಿಗರಿಂದ ಅರ್ಜಿ ಆಹ್ವಾನ : Karnataka Postal Circle Jobs 2024”

  1. Pingback: ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಗುಮಸ್ತ, ಸಹಾಯಕ ಉಪನ್ಯಾಸಕ ಮತ್ತು ಸಾಂಖ್ಯಿಕ ಅಧಿಕಾರಿ ಸೇರಿ ವಿವಿಧ ಹುದ್

Leave a Comment

Your email address will not be published. Required fields are marked *

Scroll to Top