KEA- Karnataka Social Welfare Notification ಸಮಾಜ ಕಲ್ಯಾಣ ಇಲಾಖೆಯಿಂದ ಅಧಿಸೂಚನೆ| ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ:
ಸ್ನೇಹಿತರೇ, ನಮಸ್ತೆ 2023-24ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ | ಕೆ.ಎ.ಎಸ್ / ಗ್ರೂಪ್ ಸಿ / ಬ್ಯಾಂಕಿಂಗ್ / ಎಸ್.ಎಸ್.ಸಿ / ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸುವ ಕುರಿತು ಪತ್ರಿಕಾ ಪ್ರಕಟಣೆ ಹೊರಬಿದ್ದಿದೆ. ಆಸಕ್ತರು ಇಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಿರಿ.
ಕರ್ನಾಟಕದ ಆಹಾರ ಸಂಶೋಧನಾಲಯ ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ ರೂ. 60000/-
2023-24ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ / ಕೆ.ಎ.ಎಸ್ / ಗ್ರೂಪ್ -ಸಿ | ಬ್ಯಾಂಕಿಂಗ್ / ಎಸ್.ಎಸ್.ಸಿ / ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಯು.ಪಿ.ಎಸ್.ಸಿ / ಕೆ.ಎ.ಎಸ್ / ಗ್ರೂಪ್ -ಸಿ / ಬ್ಯಾಂಕಿಂಗ್ / ಎಸ್.ಎಸ್.ಸಿ / ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (K.E.A) Karnataka Examination Authority ರವರ ಮೂಲಕ ಸಾಮಾನ್ಯ ಪವೇಶ ನಡೆಸಿ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನಿಗಧಿತ ಗುರಿಗನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಸದರಿ ಅಭ್ಯರ್ಥಿಗಳಿಗೆ ಶಿಷ್ಯ ವೇತನವನ್ನು ಸರ್ಕಾರದಿಂದ ಮಂಜೂರಾದ ದರದಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಮತ್ತು ತರಬೇತಿ ವೆಚ್ಚವನ್ನು ತರಬೇತಿ ಸಂಸ್ಥೆಗಳಿಗೆ ಪಾವತಿಸಲಾಗುವುದು.
ಯು.ಪಿ.ಎಸ್.ಸಿ / ಕೆ.ಎ.ಎಸ್ / ಗ್ರೂಪ್ -ಸಿ / ಬ್ಯಾಂಕಿಂಗ್ / ಎಸ್.ಎಸ್.ಸಿ / ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳ ಪೂರ್ವಭಾವಿ ತರಬೇತಿಯ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸಬೇಕಾದ ವೆಬ್ ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಈ ಕೆಳಕಂಡಂತಿದೆ.
ಜಿಲ್ಲಾ ಆಯುಷ್ ಕಾರ್ಯಾಲಯದಲ್ಲಿ ಖಾಲಿ ಇರುವ ಸಹಾಯಕ, ಅಟೆಂಡರ್ & ಮಲ್ಟಿ ಪರ್ಪಸ್ ವರ್ಕರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಒಟ್ಟು ಸೀಟುಗಳ ವಿವರ:
ಈ ಬಾರಿ 4850 ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಗೆ 3500 & ಪರಿಶಿಷ್ಟ ಪಂಗಡಕ್ಕೆ 1350 ಸೀಟುಗಳನ್ನು ಮೀಸಲಿಡಲಾಗಿದೆ.
ಕೋರ್ಸ್ ಗಳ ವಿವರ & ತರಬೇತಿಯ ಅವಧಿ:
ಕೋರ್ಸ್ |
ಅವಧಿ |
UPSC ಪರೀಕ್ಷೆ |
6 ತಿಂಗಳು |
KPSC/ Banking/ GRP C/ SSC/ RRB |
3 ತಿಂಗಳು |
ವಯೋಮಿತಿ:
18 ರಿಂದ 40 ವಯೋಮಾನದವರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಯ ಸಾಮಾನ್ಯ ಅರ್ಹತೆಗಳು:
- ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
- ನಿಗದಿತ ನಮೂನೆಯಲ್ಲಿ ಜಾತಿ & ಆದಾಯ ಪ್ರಮಾಣಪತ್ರ ಹೊಂದಿರಬೇಕು.
- ವಾರ್ಷಿಕ ಆದಾಯ ಎಲ್ಲ ಮೂಲಗಳಿಂದ ರೂ. 5 ಲಕ್ಷ ಮೀರಿರಬಾರದು.
- ನಿಗದಿತ ಮಿಸಲಾತಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಪ್ರಮಾಣಪತ್ರ ಪಡೆದಿರಬೇಕು.
- ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು.
ಆಯ್ಕೆ ವಿಧಾನ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಮಾಸಿಕ ಶಿಷ್ಯವೇತನ:
UPSC ತರಬೇತಿ |
5000-10000 |
KPSC/ Banking/ GRP C/ SSC/ RRB |
₹ 5000 |
ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು :
- UPSC, KAS :- ಸದರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ 100 ಅಂಕಗಳಿಗೆ ಬೆಳಗಿನ ಅವಧಿಯಲ್ಲಿ ಒಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುವಾಗ ಈ ಎರಡರಲ್ಲಿ ಯಾವ ತರಬೇತಿಗೆ ಆಯ್ಕೆಯಾಗಲು ಬಯಸುತ್ತಾರೋ, ಅಂತಹ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು ನೊಂದಾಯಿಸಿದ ತರಬೇತಿಗೆ ಮಾತ್ರ ಪ್ರವೇಶ ಪತ್ರ ದೊರೆಯುತ್ತದೆ.
- Group-C, Banking, R.R.B, S.S.C :- ಈ ನಾಲ್ಕು ಸ್ಪರ್ಧಾತ್ಮಕ ಪರೀಕ್ಷೆಗಳ ಆಯ್ಕೆಗಾಗಿ ಮಧ್ಯಾಹ್ನದ ಅವಧಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತದೆ.
- ಅಭ್ಯರ್ಥಿಯು ಎರಡು ಅವಧಿಯ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲು ಅರ್ಹರಿರುತ್ತಾರೆ.
- ಒಬ್ಬ ಅಭ್ಯರ್ಥಿಯು U.P.S.C, K.A., ಈ ಎರಡರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಬಹುದು ಅಥವಾ Group-C, Banking, RRB, SSC ಈ ನಾಲ್ಕರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಬಹುದು.
- ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಯಾವ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ಅರ್ಜಿಯಲ್ಲಿ ನಮೂದಿಸಿರುತ್ತಾರೋ ಆ ತರಬೇತಿಗೆ ಮಾತ್ರ ಪವೇಶ ಪತ್ರ ದೊರೆಯುತ್ತದೆ.
- ಬೆಳಗಿನ ಅವಧಿಯಲ್ಲಿ U.P.S.C, KAS ತರಬೇತಿಗಾಗಿ ಆಯ್ಕೆ ಮಾಡಲು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಗೂ ಮಧ್ಯಾಹ್ನದ ಅವಧಿಯಲ್ಲಿ Group-C Banking, R.R.B, S.S.C ತರಬೇತಿಯ ಆಯ್ಕೆಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಬಹುದು.
- ಅಭ್ಯರ್ಥಿಯು ಎರಡು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ, ಎರಡು ತರಬೇತಿಗೂ ಆಯ್ಕೆಯಾಗುತ್ತಾರೆ. ಆದರೆ ಅಂತಿಮವಾಗಿ ಅಭ್ಯರ್ಥಿಯು ಒಂದು ತರಬೇತಿಯನ್ನು ಪಡೆಯಲು ಮಾತ್ರ ಅರ್ಹರಿರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ www.sw.kar.nic.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-11-2023
ಪ್ರಮುಖ ಲಿಂಕುಗಳು:
ಇದರ ಉಪಯೋಗ ಎಲ್ಲರಿಗೂ ಮುಟ್ಟಬೇಕಾಗುತ್ತದೆ ..🙏