KPSC ಯಿಂದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ‌ CTI ಪರೀಕ್ಷೆಯ ಪ್ರವೇಶಪತ್ರ ಬಿಡುಗಡೆ: KPSC CTI Hall Ticket Updates

Click to Share

KPSC ಯಿಂದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ‌ CTI ಪರೀಕ್ಷೆಯ ಪ್ರವೇಶಪತ್ರ ಬಿಡುಗಡೆ: KPSC CTI Hall Ticket Updates

ಕರ್ನಾಟಕ ಲೋಕ ಸೇವಾ ಆಯೋಗದಿಂದ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ 15 ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರವನ್ನು ಇಂದಿನಿಂದ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಕ್ಲಯಾಣ ಕರ್ನಾಟಕ ಅಭ್ಯರ್ಥಿಗಳು ಕೆಳಗೆ ನೀಡಲಾದ ಲಿಂಕ್ ಬಳಸಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಇದೇ ತಿಂಗಳು 6 & 7 ನೇ ತಾರೀಖಿನಂದು ಪರೀಕ್ಷೆ ಬರೆಯಬಹುದು. 

ಕರ್ನಾಟಕ ನ್ಯಾಯಾಂಗ ಇಲಾಖೆಯಲ್ಲಿ ಹತ್ತನೇ ಮುಗಿದವರಿಗೆ ಉದ್ಯೋಗಾವಕಾಶ: 31 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ: ವೇತನ ರೂ. 25000/-: Karnataka Judiciary Jobs 2023

ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ:30-08-2023ರಲ್ಲಿ ಅಧಿಸೂಚಿಸಲಾದ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರ 15 (ಕಲ್ಯಾಣ ಕರ್ನಾಟಕ ವೃಂದದ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ದಿನಾಂಕ:06-01-2024 ಮತ್ತು 07-01-2024ರಂದು ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ನಡೆಸಲಾಗುವ ಪರೀಕ್ಷೆ ಸಂಬಂಧ “ಪ್ರವೇಶ ಪತ್ರವನ್ನು” ಆಯೋಗದ ವೆಬ್ ಸೈಟ್ http://kpsc.kar.nic.in ರಲ್ಲಿ ದಿನಾಂಕ:02-01-2024 ರಿಂದ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ನೊಂದಣಿ ಮಾಡಿದ ಮೊಬೈಲ್ ನಂಬರ್‌, ಇ-ಮೇಲ್ ಐಡಿ ಅಥವಾ Enrolement Number ಇವುಗಳಲ್ಲಿ, ಯಾವುದಾದರು ಒಂದನ್ನು ನಮೂದಿಸಿ ಲಾಗಿನ್ ಮಾಡಿ Dash Board Menu ನಲ್ಲಿ Admit card Option ಗೆ ಹೋಗಿ ಅಧಿಸೂಚನೆ (Notification) Click ಮಾಡಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ. 

ನ್ಯಾಷನಲ್ ಇನ್ಸುರೆನ್ಸ್ ಕಂಪನಿ ನಿಯಮಿತದಲ್ಲಿ (NICL) ಖಾಲಿ ಇರುವ 274 ಆಫೀಸರ್ ಸ್ಕೇಲ್ 1 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: NICL 274 Vacancies Jobs 2024

ಆಯೋಗದಿಂದ ಪ್ರಥಮ ಬಾರಿಗೆ KPSC Udyoga Software ಅನ್ನು ಅಭಿವೃದ್ಧಿ, ಪಡಿಸಲಾಗಿದ್ದು, ಸದರಿ ಪರೀಕ್ಷೆಯು ಈ ತಂತ್ರಾಂಶದ ಮೂಲಕ ನಡೆಸಲಾಗುತ್ತಿರುವ ಪ್ರಥಮ ಪರೀಕ್ಷೆಯಾಗಿರುತ್ತದೆ. ಆದ್ದರಿಂದ ಪ್ರವೇಶ ಪತ್ರದಲ್ಲಿ, ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಹಂಚಿಕೆ ಮಾಡುವ ವಿಷಯದಲ್ಲಿ ಹಾಗೂ ನಾಮಿನಲ್ ರೋಲ್ ನಲ್ಲಿ ಭಾವಚಿತ್ರ, ಹೆಸರು ಮತ್ತು ಇನ್ನಿತರ ವಿಷಯಗಳಲ್ಲಿ ವ್ಯತ್ಯಾಸವಾಗಿರುವ ಸಂಭವವಿರುತ್ತದೆ. ಅಂತಹ ಯಾವುದಾದರೂ ವಿಷಯಗಳಿದ್ದಲ್ಲಿ ಅವುಗಳನ್ನು ಆಯೋಗದ ಮೇಲ್ಕಂಡ ಇ-ಮೇಲ್ ಗೆ ಮೇಲ್ ಮಾಡುವಂತೆ ಹಾಗೂ ಅಭ್ಯರ್ಥಿಗಳು ಯಾವುದೇ ಗೊಂದಲ ಹಾಗೂ ಆತಂಕಕ್ಕೆ ಒಳಗಾಗದೆ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಿದೆ.

ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾದಲ್ಲಿ Help Line ಸಂಖ್ಯೆ:080-22200090, 22346487, 30574901, 30574957 ಅನ್ನು ಸಂಪರ್ಕಿಸಬಹುದು ಹಾಗೂ ctipending@gmail.com ಗೆ ಮೇಲ್ ಮಾಡಬಹುದಾಗಿರುತ್ತದೆ.

Download the Hall Ticket


Click to Share

1 thought on “KPSC ಯಿಂದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ‌ CTI ಪರೀಕ್ಷೆಯ ಪ್ರವೇಶಪತ್ರ ಬಿಡುಗಡೆ: KPSC CTI Hall Ticket Updates”

  1. Pingback: ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಜಿಲ್ಲಾ ಯೋಜನಾ ವ್ಯವಸ್ಥಾಪಕ  ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ-

Leave a Comment

Your email address will not be published. Required fields are marked *

Scroll to Top