KREIS ಶಿಕ್ಷಕರು, ಹಾಸ್ಟೇಲ್ ವಾರ್ಡನ್ & FDA ನೇಮಕಾತಿ- ಹೆಚ್ಚುವರಿ ಪಟ್ಟಿ ಜೊತೆಗೆ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ| KREIS Additional List
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆಗಳಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಕನ್ನಡ ಭಾಷಾ, ಆಂಗ್ಲ ಭಾಷಾ, ಗಣಿತ, ವಿಜ್ಞಾನ, ದೈಹಿಕ ಶಿಕ್ಷಣ ಶಿಕ್ಷಕ, ಕಂಪ್ಯೂಟರ್, ಪ್ರಥಮ ದರ್ಜೆ ಸಹಾಯಕರು, ನಿಲಯಪಾಲಕರು, ಶುಶ್ರೂಷಕ ಅಭ್ಯರ್ಥಿಗಳ ವೈದ್ಯಕೀಯ ಪ್ರಮಾಣ ಪತ್ರ (ದೇಹದಾರ್ಡ್ಯತೆ ಪರೀಕ್ಷಾ ಪ್ರಮಾಣ ಪತ್ರ) ನೀಡುವ ಕುರಿತು ಮಹತ್ವದ ಮಾಹಿತಿಯನ್ನು ನೀಡಲಾಗಿದೆ. ಹೆಚ್ಚುವರಿ ಪಟ್ಟಿಯಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕೂಡಲೇ ಪ್ರಕಟಣೆಯಲ್ಲಿ ತಿಳಿಸಲಾಗಿರುವ ಅಂಶಗಳನ್ನು ಕ್ರಮವಹಿಸಲು ತಿಳಿಸಲಾಗಿದೆ.
ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ: HFW Walk in 2023
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆಗಳಲ್ಲಿ ಖಾಲಿ ಇದ್ದ ಉಲ್ಲೇಖಿತ ಅಧಿಸೂಚನೆಯ ಅಂತಿಮ ಆಯ್ಕೆಪಟ್ಟಿಯಲ್ಲಿನ ಹುದ್ದೆಗಳಿಗೆ ಗೈರು ಹಾಜರಾಗಿರುವ ಅಭ್ಯರ್ಥಿಗಳ ಎದುರಾಗಿ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಕನ್ನಡ ಭಾಷಾ, ಆಂಗ್ಲ ಭಾಷಾ, ಗಣಿತ, ವಿಜ್ಞಾನ, ದೈಹಿಕ ಶಿಕ್ಷಣ ಶಿಕ್ಷಕ, ಕಂಪ್ಯೂಟರ್, ಪ್ರಥಮ ದರ್ಜೆ ಸಹಾಯಕರು, ನಿಲಯಪಾಲಕರು, ಶುಶೂಷಕ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು, ಅರ್ಹ ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಮೊದಲು ಕರ್ನಾಟಕ ನಾಗರೀಕ ಸೇವಾ (ನೇಮಕಾತಿ) ನಿಯಮಗಳು 1977 ನಿಯಮ-12 ರನ್ವಯ ವೈದ್ಯಕೀಯ ಪ್ರಮಾಣ ಪತ್ರ (ದೇಹದಾರ್ಡ್ಯತೆ ಪರೀಕ್ಷಾ ಪ್ರಮಾಣ ಪತ್ರ ಪಡೆಯಬೇಕಾಗಿರುತ್ತದೆ. ಆದ್ದರಿಂದ ವೈದ್ಯಕೀಯ ಪ್ರಮಾಣ ಪತ್ರವನ್ನು ಜಿಲ್ಲಾ ಸರ್ಜನ್ ಶ್ರೇಣಿಗಿಂತ ಕಡಿಮೆ ಇಲ್ಲದ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರ (ದೇಹದಾರ್ಡ್ಯತೆ ಪರೀಕ್ಷಾ ಪ್ರಮಾಣ ಪತ್ರ) ವನ್ನು ಪಡೆದು ಈ ಕಛೇರಿಯಿಂದ ನಡೆಸುವ ದಾಖಲಾತಿ ಪರೀಕ್ಷೆಯ ಸಮಯದಲ್ಲಿ ಸಲ್ಲಿಸಲು ತಿಳಿಸಲಾಗಿದೆ.
ವಿಶೇಷ ಸೂಚನೆ : ಪೋಲೀಸ್ ಇಲಾಖೆಯಿಂದ ಚಾರಿತ್ರ, ವರದಿ ಪಡೆಯಲು ಆಯಾ ಜಿಲ್ಲೆಗಳ ಪೋಲೀಸ್ ಅಧೀಕ್ಷಕರಿಗೆ, ಯೋಜನಾ ನಿರಾಶ್ರಿತರ ಪುಮಾಣ ಪತ್ರದ ನೈಜತೆಗಾಗಿ ಸಂಬಂಧಿಸಿದ ತಹಸೀಲ್ದಾರರಿಗೆ, ಹೈದರಬಾದ್ ಕರ್ನಾಟಕ ಪಮಾಣ ಪತ್ರದ ನೈಜತೆಗಾಗಿ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ತಾವುಗಳೇ ಈ ಬಗ್ಗೆ ಸಂಬಂಧಿಸಿದ ಕಛೇರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮವಹಿಸಲು ಸೂಚಿಸಿದೆ.
Pingback: ತೈಲ ನಿಗಮದಲ್ಲಿ ಖಾಲಿ ಇರುವ 2500 ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ- ONGC 2500 Recruitment 2023 - edutechkannada.com
Pingback: KPSC ಯಿಂದ 230 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ: KPSC CTI Recruitment 2023 - edutechkannada.com
Pingback: RBI ನಲ್ಲಿ ಖಾಲಿ ಇರುವ 450 ಸಹಾಯಕ ಹುದ್ದೆಗಳ ನೇಮಕಾತಿಗೆ Online ಅರ್ಜಿ ಆಹ್ವಾನ: RBI Recruitment 2023 - edutechkannada.com