ರಾಯಚೂರು ಜಿಲ್ಲೆಯಲ್ಲಿ ಖಾಲಿ ಇರುವ 143 ಹುದ್ದೆಗಳ ಭರ್ತಿಗೆ ಹತ್ತನೇ, ಪಿಯುಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ: Raihur Wcd Jobs 2024

Click to Share

ರಾಯಚೂರು ಜಿಲ್ಲೆಯಲ್ಲಿ ಖಾಲಿ ಇರುವ 143 ಹುದ್ದೆಗಳ ಭರ್ತಿಗೆ ಹತ್ತನೇ, ಪಿಯುಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ: Raihur Wcd Jobs 2024

ರಾಜ್ಯ ಮಹಿಳೆ & ಮಕ್ಕಳ ಕಲ್ಯಾಣ ಇಲಾಖೆ, ರಾಯಚೂರು ಜಿಲ್ಲೆಯ ಮಾನವಿ ಮತ್ತು ಲಿಂಗಸುಗೂರು ಶಿಶು ಅಭಿವೃದ್ಧಿ  ಯೋಜನೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಈ ಜಿಲ್ಲೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 143 ಅಂಗನವಾಡಿ ಕಾರ್ಯಕರ್ತೆ & ಸಹಾಯಕಿಯರ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ  ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 29-09-2024 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಜೆಇ & ಎಇ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ವೇತನ ರೂ. 30000/- 

ರಾಯಚೂರು ಜಿಲ್ಲೆಯ ಮಹಿಳೆ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ  ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ.

ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

NIACL ನಲ್ಲಿ ಖಾಲಿ ಇರುವ  170 ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರವನ್ನು ಗಮನಿಸಿ:

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಅಂಗನವಾಡಿ ಕಾರ್ಯಕರ್ತೆ 38
ಅಂಗನವಾಡಿ ಸಹಾಯಕಿ 105
ಒಟ್ಟು ಹುದ್ದೆಗಳು 143 ಹುದ್ದೆಗಳು

ತಾಲೂಕುವಾರು ಹುದ್ದೆಗಳ ವಿವರ:

ತಾಲೂಕುಗಳು ಹುದ್ದೆಗಳ ಸಂಖ್ಯೆ
ಮಾನವಿ ಅಂಗನವಾಡಿ ಕಾರ್ಯಕರ್ತೆ 20
ಮಾನವಿ- ಸಹಾಯಕಿ 54
ಲಿಂಗಸುಗೂರು- ಅಂಗನವಾಡಿ ಕಾರ್ಯಕರ್ತೆ 18
ಲಿಂಗಸುಗೂರು- ಸಹಾಯಕಿ 51

ವೇತನ ಶ್ರೇಣಿ:

ಕರ್ನಾಟಕ ಸರ್ಕಾರದಿಂದ ನಿಗದಿಪಡಿಸಿದ ವೇತನವನ್ನು ಮಾಸಿಕವಾಗಿ ರೂ. 8000-12000 ವೇತನವನ್ನು ನೀಡಲಾಗುತ್ತದೆ.

ವಿದ್ಯಾರ್ಹತೆ ಏನಿರಬೇಕು?

ಕಾರ್ಯಕರ್ತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು

ಸಹಾಯಕಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ  ಹತ್ತನೇ ತರಗತಿ ಉತ್ತೀರ್ಣ ಹೊಂದಿರಬೇಕು

ವಯೋಮಿತಿ:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಭ್ಯರ್ಥಿಗಳು ಕನಿಷ್ಟ 19 ವರ್ಷ ತುಂಬಿರಬೇಕು

ಅಭ್ಯರ್ಥಿಗಳು ಗರಿಷ್ಟ ಅಂದರೇ 35 ವರ್ಷದವರೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ:

ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ :

ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು & ಬೋನಸ್ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ & ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ನಲ್ಲಿ ದಿನಾಂಕ 29-09-2024 ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

RDWSD ಇಲಾಖೆಯಲ್ಲಿ ಖಾಲಿ ಇರುವ 47 ಕನ್ಸಲ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ದಿನಾಂಕಗಳು:

ಅರ್ಜಿ ಆನ್ಲೈನ್ ಮೂಲಕ ಸಲ್ಲಿಸುವ ಕೊನೆಯ ದಿನಾಂಕ: 29-09-2024

ಅಧಿಕೃತ ಲಿಂಕ್/ Official Links:

Apply Online

Notification

Official Website


Click to Share

2 thoughts on “ರಾಯಚೂರು ಜಿಲ್ಲೆಯಲ್ಲಿ ಖಾಲಿ ಇರುವ 143 ಹುದ್ದೆಗಳ ಭರ್ತಿಗೆ ಹತ್ತನೇ, ಪಿಯುಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ: Raihur Wcd Jobs 2024”

  1. Pingback: ಆಹಾರ ನಿಗಮದಲ್ಲಿ ಒಟ್ಟು 15465 ಗುಮಾಸ್ತ &  ಇತರೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿಯೇ ಅಧಿಸೂಚನೆ: FCI Upcoming

  2. Pingback: ಶಿಕ್ಷಣ ಇಲಾಖೆಯಲ್ಲಿ ಸಚಿವಾಲಯ ಸಹಾಯಕ ಸೇರಿ ವಿವಿಧ ಸಿ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ-NITTTRC Jobs 2024 - EduTech Kannada

Leave a Comment

Your email address will not be published. Required fields are marked *

Scroll to Top