ಕರ್ನಾಟಕದ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಕ್ಲರ್ಕ್ & ಚಾಲಕರು ಸೇರಿ ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: SSBJ Recruitment 2024

Click to Share

ಕರ್ನಾಟಕದ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಕ್ಲರ್ಕ್ & ಚಾಲಕರು ಸೇರಿ ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: SSBJ Recruitment 2024

ಸೈನಿಕ ಶಾಲೆ, ಬಿಜಾಪುರ ಜಿಲ್ಲೆಯ ವತಿಯಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಈ ಸೈನಿಕ ಶಾಲೆಯಲ್ಲಿ  ಖಾಲಿ ಇರುವ ಲೋವರ್ ಡಿವಿಸನ್ ಕ್ಲರ್ಕ್, ವಾರ್ಡನ್ ಬಾಯ್, ನರ್ಸಿಂಗ್ ಸಿಸ್ಟರ್, ಚಾಲಕರು ಸೇರಿದಂತೆ ವಿವಿಧ  ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ  ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಪೋಸ್ಟ್  ಮೂಲಕ ಅರ್ಜಿ ಸಲ್ಲಿಸಲು 04-05-2024ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

ಜಿಲ್ಲಾ ಕೋಆಪರೇಟಿವ್ ಬ್ಯಾಂಕುಗಳಲ್ಲಿ ಖಾಲಿ ಇರುವ ಕ್ಲರ್ಕ್ ಕಮ್ ಕ್ಯಾಶಿಯರ್ ಸೇರಿ ವಿವಿಧ 233 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸೈನಿಕ ಶಾಲೆ, ಬಿಜಾಪುರದಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: ವೇತನ ರೂ. 1,00,000 

ಹುದ್ದೆಗಳ ವಿವರವನ್ನು ಗಮನಿಸಿ:

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಲೋವರ್ ಡಿವಿಸನ್ ಕ್ಲರ್ಕ್ 01
ವಾರ್ಡ್ ಬಾಯ್ 04
ನರ್ಸಿಂಗ್ ಸಿಸ್ಟರ್ 01
PEM/ PTI-com Matron (Female) 01
ಕೌನ್ಸಲರ್ 01
ಮ್ಯೂಸಿಕ್ ಟೀಚರ್ 01
ಚಾಲಕರು 01

ವೇತನ ಶ್ರೇಣಿ:

ಸೈನಿಕ ಶಾಲೆಯ ನಿಯಮಾವಳಿಗಳ ಅನ್ವಯ ಪ್ರತಿ ತಿಂಗಳಿಗೆ ರೂ. 20000-30000ದವರೆಗೆ ಕ್ರೂಢಿಕೃತ ವೇತನ ನೀಡಲಾಗುತ್ತದೆ.

ವಿದ್ಯಾರ್ಹತೆ ಏನಿರಬೇಕು?

ಹುದ್ದೆಯ ಹೆಸರು ವಿದ್ಯಾರ್ಹತೆ
ಲೋವರ್ ಡಿವಿಸನ್ ಕ್ಲರ್ಕ್ ಪಿಯುಸಿ/ ತತ್ಸಮಾನ
ವಾರ್ಡ್ ಬಾಯ್ 10ನೇ ತರಗತಿ
ನರ್ಸಿಂಗ್ ಸಿಸ್ಟರ್ ಡಿಪ್ಲೋಮಾ ಇನ್ ನರ್ಸಿಂಗ್
PEM/ PTI-com Matron (Female) ಬಿಪಿಎಡ್
ಕೌನ್ಸಲರ್ Graduate (Psychology)
ಮ್ಯೂಸಿಕ್ ಟೀಚರ್ Degree/ Diploma (Music)
ಚಾಲಕರು 10th Pass & Driving License

ವಯೋಮಿತಿ:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 21 ವರ್ಷ ತುಂಬಿರಬೇಕು & ಗರಿಷ್ಟ ಅಂದರೇ 35 ವರ್ಷದವರೆಗೆ ಅರ್ಜಿ ಸಲ್ಲಿಸಬಹುದು.

ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದವರಿಗೆ 05 ವರ್ಷ ಹಾಗೂ ಓಬಿಸಿಯವರಿಗೆ 03ವರ್ಷ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ಇದೆ.

 

ಅರ್ಜಿ ಶುಲ್ಕ:

ಪ್ರತಿಯೊಬ್ಬರು ರೂ. 1500/- ಮಾತ್ರ ಪಾವತಿಸಬೇಕು.

ಅರ್ಜಿ ಶುಲ್ಕವನ್ನು Principal, Sainik School, Bijapura ಅವರ ಹೆಸರಿಗೆ ಪಾವತಿಯಾಗುವಂತೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ ಹೇಗಿರುತ್ತೆ?

ಲಿಖಿತ ಪರೀಕ್ಷೆ / ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಹಾಕುವುದು ಹೇಗೆ?:

ಅರ್ಹ & ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಕೃತ ವೆಬ್ಸೈಟ್ ಗೆ ಬೇಟಿ ನೀಡಿ ಅರ್ಜಿ ನಮೂನೆ ಮುದ್ರಿಸಿಕೊಂಡು ಭರ್ತಿ ಮಾಡಬೇಕು. ಜೊತೆಗೆ ಎಲ್ಲ ಅಗತ್ಯ ದಾಖಲೆಗಳು, ಡಿಮ್ಯಾಂಡ್ ಡ್ರಾಫ್ಟ್ & ಇತ್ತೀಚಿನ ಭಾವಚಿತ್ರದೊಂದಿಗೆ   ದಿನಾಂಕ 04-05-2024 ರ ಒಳಗಾಗಿ ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸಕ್ಕೆ ಪೋಸ್ಟ್ ಮುಖಾಂತರ ಅರ್ಜಿ ಕಳುಹಿಸಬೇಕು.

KPSC ಯಿಂದ 384 ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಶನರಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ದಿನಾಂಕಗಳು:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 04-05-2023

ಅಧಿಕೃತ ಲಿಂಕ್/ Official Links:

ನೋಟಿಫಿಕೇಶನ್/ Notification

ಅರ್ಜಿ ನಮೂನೆ/ Application Form


Click to Share

1 thought on “ಕರ್ನಾಟಕದ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಕ್ಲರ್ಕ್ & ಚಾಲಕರು ಸೇರಿ ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: SSBJ Recruitment 2024”

  1. Pingback: ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 513 ಅಂಗನವಾಡಿ ಸಹಾಯಕಿ & ಕಾರ್ಯಕರ್ತೆ ಹುದ್ದೆಗಳ ಭರ್ತಿಗೆ ಅರ್

Leave a Comment

Your email address will not be published. Required fields are marked *

Scroll to Top