ಕರ್ನಾಟಕದ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಕ್ಲರ್ಕ್ & ಚಾಲಕರು ಸೇರಿ ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: SSBJ Recruitment 2024
ಸೈನಿಕ ಶಾಲೆ, ಬಿಜಾಪುರ ಜಿಲ್ಲೆಯ ವತಿಯಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಈ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಲೋವರ್ ಡಿವಿಸನ್ ಕ್ಲರ್ಕ್, ವಾರ್ಡನ್ ಬಾಯ್, ನರ್ಸಿಂಗ್ ಸಿಸ್ಟರ್, ಚಾಲಕರು ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಲು 04-05-2024ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
ಸೈನಿಕ ಶಾಲೆ, ಬಿಜಾಪುರದಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: ವೇತನ ರೂ. 1,00,000
ಹುದ್ದೆಗಳ ವಿವರವನ್ನು ಗಮನಿಸಿ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಲೋವರ್ ಡಿವಿಸನ್ ಕ್ಲರ್ಕ್ | 01 |
ವಾರ್ಡ್ ಬಾಯ್ | 04 |
ನರ್ಸಿಂಗ್ ಸಿಸ್ಟರ್ | 01 |
PEM/ PTI-com Matron (Female) | 01 |
ಕೌನ್ಸಲರ್ | 01 |
ಮ್ಯೂಸಿಕ್ ಟೀಚರ್ | 01 |
ಚಾಲಕರು | 01 |
ವೇತನ ಶ್ರೇಣಿ:
ಸೈನಿಕ ಶಾಲೆಯ ನಿಯಮಾವಳಿಗಳ ಅನ್ವಯ ಪ್ರತಿ ತಿಂಗಳಿಗೆ ರೂ. 20000-30000ದವರೆಗೆ ಕ್ರೂಢಿಕೃತ ವೇತನ ನೀಡಲಾಗುತ್ತದೆ.
ವಿದ್ಯಾರ್ಹತೆ ಏನಿರಬೇಕು?
ಹುದ್ದೆಯ ಹೆಸರು | ವಿದ್ಯಾರ್ಹತೆ |
ಲೋವರ್ ಡಿವಿಸನ್ ಕ್ಲರ್ಕ್ | ಪಿಯುಸಿ/ ತತ್ಸಮಾನ |
ವಾರ್ಡ್ ಬಾಯ್ | 10ನೇ ತರಗತಿ |
ನರ್ಸಿಂಗ್ ಸಿಸ್ಟರ್ | ಡಿಪ್ಲೋಮಾ ಇನ್ ನರ್ಸಿಂಗ್ |
PEM/ PTI-com Matron (Female) | ಬಿಪಿಎಡ್ |
ಕೌನ್ಸಲರ್ | Graduate (Psychology) |
ಮ್ಯೂಸಿಕ್ ಟೀಚರ್ | Degree/ Diploma (Music) |
ಚಾಲಕರು | 10th Pass & Driving License |
ವಯೋಮಿತಿ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 21 ವರ್ಷ ತುಂಬಿರಬೇಕು & ಗರಿಷ್ಟ ಅಂದರೇ 35 ವರ್ಷದವರೆಗೆ ಅರ್ಜಿ ಸಲ್ಲಿಸಬಹುದು.
ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದವರಿಗೆ 05 ವರ್ಷ ಹಾಗೂ ಓಬಿಸಿಯವರಿಗೆ 03ವರ್ಷ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ:
ಪ್ರತಿಯೊಬ್ಬರು ರೂ. 1500/- ಮಾತ್ರ ಪಾವತಿಸಬೇಕು.
ಅರ್ಜಿ ಶುಲ್ಕವನ್ನು Principal, Sainik School, Bijapura ಅವರ ಹೆಸರಿಗೆ ಪಾವತಿಯಾಗುವಂತೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು.
ಆಯ್ಕೆ ವಿಧಾನ ಹೇಗಿರುತ್ತೆ?
ಲಿಖಿತ ಪರೀಕ್ಷೆ / ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಹಾಕುವುದು ಹೇಗೆ?:
ಅರ್ಹ & ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಕೃತ ವೆಬ್ಸೈಟ್ ಗೆ ಬೇಟಿ ನೀಡಿ ಅರ್ಜಿ ನಮೂನೆ ಮುದ್ರಿಸಿಕೊಂಡು ಭರ್ತಿ ಮಾಡಬೇಕು. ಜೊತೆಗೆ ಎಲ್ಲ ಅಗತ್ಯ ದಾಖಲೆಗಳು, ಡಿಮ್ಯಾಂಡ್ ಡ್ರಾಫ್ಟ್ & ಇತ್ತೀಚಿನ ಭಾವಚಿತ್ರದೊಂದಿಗೆ ದಿನಾಂಕ 04-05-2024 ರ ಒಳಗಾಗಿ ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸಕ್ಕೆ ಪೋಸ್ಟ್ ಮುಖಾಂತರ ಅರ್ಜಿ ಕಳುಹಿಸಬೇಕು.
KPSC ಯಿಂದ 384 ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಶನರಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ದಿನಾಂಕಗಳು:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 04-05-2023
ಅಧಿಕೃತ ಲಿಂಕ್/ Official Links:
Pingback: ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 513 ಅಂಗನವಾಡಿ ಸಹಾಯಕಿ & ಕಾರ್ಯಕರ್ತೆ ಹುದ್ದೆಗಳ ಭರ್ತಿಗೆ ಅರ್