ಪ್ರೌಢಶಾಲೆಗಳಲ್ಲಿ ಖಾಲಿ ಇರುವ 5120 ಬೋಧಕ ಹುದ್ದೆಗಳ ಭರ್ತಿಗೆ ಅನುಮತಿ| ಅನುದಾನಿತ ಶಾಲೆಗಳಲ್ಲಿ ನೇಮಕಾತಿ ಆರಂಭ: Aided teacher recruitment Notification 2023
ಕರ್ನಾಟಕ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಕ್ರಮ ವಹಿಸಲಾಗಿದೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ. ಈ ಮೂಲಕ ಅನುದಾನಿತ ಶಾಲೆಗಳಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ.
ಕೇಂದ್ರ ಆಹಾರ ಇಲಾಖೆಯಲ್ಲಿ ಖಾಲಿ ಇರುವ ಅಕೌಂಟೆಂಟ್ & MTS ಹುದ್ದೆಗಳಿಗೆ ಅರ್ಜಿ ಆಹ್ವಾನ: NIFTEM Recruitment 2023
ರಾಜ್ಯದ ಅನುದಾನಿತ ಖಾಸಗಿ ಪ್ರೌಢಶಾಲೆಗಳಲ್ಲಿ ವಿವಿಧ ವಿಷಯಗಳ ಒಟ್ಟು 5120 ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ ಎಂಬ ಅಂಶವನ್ನು ವಿಧಾನ ಪರಿಷತ್ ನ ಚರ್ಚೆಯ ವೇಳೆ ಮಾನ್ಯ ಶಿಕ್ಷಣ ಸಚಿವರು ಹೊರಹಾಕಿದ್ದಾರೆ.
ವಿಧಾನಪರಿಷತ್ತು ಅನುದಾನಿತ ಶಾಲೆಗಳಿಗೆ ಖಾಲಿ ಇರುವ 5120 ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮವಹಿಸಲಾಗುವುದು. ಅದರಲ್ಲಿ 1.784 ಹುದ್ದೆಗಳ ಭರ್ತಿಗೆ ಆರ್ಥಿಕ ಲಾಖೆ ಅನುಮತಿ ಬೇಕಿದ್ದು, ಶೀಘ್ರದಲ್ಲಿ ಅದಕ್ಕೆ ಅನುಮೋದನೆ ಪಡೆದು ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವೆ ಎಂದು ಬಂಗಾರಪ್ಪ ತಿಳಿಸಿದರು
ರಾಜ್ಯದಲ್ಲಿನ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ನೇಮಕಾತಿ ಕುರಿತಂತೆ ಮಾನ್ಯ ಸದಸ್ಯರೊಬ್ಬರು ಸಚಿವರ ಗಮನ ಸೆಳೆದರು. ಅದಕ್ಕೆ ಉತ್ತರಿಸಿದ ಮಧು ಬಂಗಾರಪ್ಪ, ಅನುದಾನಿತ ಶಾಲೆಗಳಿಗೆ 1,324 ಬೋಧಕ ಹುದ್ದೆಗಳ ಭರ್ತಿಗೆ 2015 ರ ಹಿಂದೆಯೇ ಅನುಮತಿಸಲಾಗಿದೆ, ಆದರೆ ಕೆಲವೊಂದು ನಿಯಮಗಳಿಂದಾಗಿ ಹುದ್ದೆಗಳು ಭರ್ತಿಯಾಗಿಲ್ಲ, ಅದರ ಜೊತೆಗೆ ಇದೀಗ ಖಾಲಿ 3,734 ಹುದ್ದೆಗಳು ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕಿದೆ. ಈ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಲಿದ್ದೇನೆ. ಜೊತೆಗೆ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಅನುಮತಿ ಪಡೆಯಲಾಗುವುದು. ಶೀಘ್ರದಲ್ಲೇ ಅನುದಾನಿತ ಶಾಲೆಗಳಿಗೆ ಬೋಧಕ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಬಿಎಡ್ ಮುಗಿಸಿ ಅನುದಾನಿತ ಶಾಲೆಗಳಲ್ಲಿ ಶಿಕ್ಷಕ ವೃತ್ತಿ ಆರಂಭಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಶೀಘ್ರದಲ್ಲೆ ಸರ್ಕಾರದಿಂದ ಶಿಕ್ಷಕ ಹುದ್ದೆಗಳನ್ನು ತುಂಬಲು ಅನುಮತಿಯನ್ನು ನಿರೀಕ್ಷಿಸಬಹುದು.
Important Link
ಅನುದಾನಿತ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಯಾವಾಗ ತುಂಬಿಕೊಳ್ಳುತ್ತೀರಿ ಸರ್ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಳಜಿ ವಹಿಸಬೇಕೆಂದು ತಮ್ಮಲ್ಲಿ ವಿನಂತಿ 2016 ರಿಂದ 2021 ವರೆಗೆ ತುಂಬಾ ಹುದ್ದೆ ಖಾಲಿಯಾಗಿದೆ. ಒಂದೊಂದು ಶಾಲೆಯಲ್ಲಿ ಶಿಕ್ಷಕರು ಇಲ್ಲ. ದಯಾಳುಗಳು ತಾವು ಶಿಕ್ಷಕರ ಹುದ್ದೆ ತುಂಬಿಕೊಳ್ಳಲು ಅನುಮತಿ ಕೊಡಬೇಕೆಂದು ತಮ್ಮಲ್ಲಿ ವಿನಂತಿ