NEST ವಸತಿ ಶಾಲೆಗಳಲ್ಲಿ  ಖಾಲಿ ಇರುವ 2570 ಪಿಜಿಟಿ ಶಿಕ್ಷಕರು & ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: NEST EMRS Teacher Recruitment 2023

Click to Share

NEST ವಸತಿ ಶಾಲೆಗಳಲ್ಲಿ  ಖಾಲಿ ಇರುವ 2570 ಪಿಜಿಟಿ ಶಿಕ್ಷಕರು & ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: NEST Teacher Recruitment 2023

ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಸಂಸ್ಥೆಯಲ್ಲಿ ಬೃಹತ್ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಬೋಧಕ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. ಒಟ್ಟು 2570 ಹುದ್ದೆಗಳ ನೇರ ನೇಮಕಾತಿ ನಡೆಯುತ್ತಿದ್ದು ಅದರ  ಅಧಿಸೂಚನೆಯನ್ನು ಬಿಡುಗಡೆಗೊಳಿಸಿದೆ. EMRS ನಲ್ಲಿ ಖಾಲಿ ಇರುವ ಪ್ರಿನ್ಸಿಪಾಲರು & ಪಿಜಿಟಿ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 31, 2023 ಕೊನೆಯ ದಿನಾಂಕವಾಗಿದೆ.  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಅತಿಥಿ ಉಪನ್ಯಾಸಕರ ಭರ್ತಿಗೆ ವಿಶ್ವವಿದ್ಯಾಲಯದಿಂದ ಅರ್ಜಿ ಆಹ್ವಾನ: ವೇತನ ರೂ. 32000/- RCUB GL Recruitment 2023

Ekalavya Model Residential School ನಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ.

ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ರಾಷ್ಟ್ರೀಯ ಮಿಲಿಟರಿ ಶಾಲೆ, ಬೆಳಗಾವಿಯಿಂದ ಹೊಸ ನೇಮಕಾತಿ ಅಧಿಸೂಚನೆ: RMS Belagavi Recruitment 2023

 

ಹುದ್ದೆಗಳ ವಿವರ/ Post Details:

ಪ್ರಿನ್ಸಿಪಾಲರು ಹುದ್ದೆಗಳು:

ಪರಿಶಿಷ್ಟ ಜಾತಿ 45
ಪರಿಶಿಷ್ಟ ಪಂಗಡ 22
ಇತರೆ ಹಿಂದೂಳಿದ ವರ್ಗ (OBC) 81
ಆರ್ಥಿಕವಾಗಿ ಹಿಂದೂಳಿದವರು (EWS) 30
ಸಾಮಾನ್ಯ ವರ್ಗ 125
ಒಟ್ಟು ಹುದ್ದೆಗಳು 303

Post Graduate Teacher (PGT):

English 246
Hindi 200
Maths 244
Chemistry 169
Physics 179
Biology 236
History 185
Geography 154
Commerce 140
Economics 161
Computer Science 172
Total Posts 2086

 

ವೇತನ/ Salary

ಪ್ರಿನ್ಸಿಪಾಲ್- 78800-209200
PGT ಶಿಕ್ಷಕರು- 47600-151100

ಮೂಲವೇತನದ ಜೊತೆಗೆ ಕೇಂದ್ರ ಸರ್ಕಾರದ ನಿಯಮಾವಳಿಗಳನ್ವಯ ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಬ್ಯಾಂಕ್ ನೋಟ್ ಪ್ರೆಸ್ ನಲ್ಲಿ ಖಾಲಿ ಇರುವ 111 ಕಛೇರಿ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: BNP Office Assistant Recruitment 2023

ಶೈಕ್ಷಣಿಕ ಅರ್ಹತೆಗಳು/ Educational Qualification:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಕೆಳಗೆ ನೀಡಲಾಗಿರುವ ವಿದ್ಯಾರ್ಹತೆಯನ್ನು ಮುಗಿಸಿರಬೇಕು.

ಪ್ರಿನ್ಸಿಪಾಲರು/ Principal:

ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮುಗಿಸಿರಬೇಕು.

ಬಿಎಡ್ ಪದವಿ ಮುಗಿದಿರಬೇಕು.

12 ವರ್ಷಗಳ ಕಾಲ ಶಿಕ್ಷಕರಾಗಿ/ ಉಪ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಅನುಭವ ಇರಬೇಕು.

 

Post  Graduate Teacher/ ಪಿಜಿಟಿ ಶಿಕ್ಷಕರು:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂದಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ & ಬಿಎಡ್ ಶಿಕ್ಷಣವನ್ನು ಮುಗಿಸಿರಬೇಕು.

PGT Computer Science :

MSc in Computer Science/ MCA/ ME or MTech in Computer Science

ಅರ್ಜಿ ಶುಲ್ಕ/ Application Fees:

ಪ್ರಿನ್ಸಿಪಾಲ್- ರೂ. 2000/-
ಪಿಜಿಟಿ ಶಿಕ್ಷಕರು- ರೂ. 1500/-

 ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ & ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ

ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

ವಯೋಮಿತಿ/ Age limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & ಕೆಳಕಂಡ ಗರಿಷ್ಟ ವಯೋಮಿತಿಯನ್ನು ಮೀರಬಾರದು.

ಪ್ರಿನ್ಸಿಪಾಲ್- 50 ವರ್ಷ
ಪಿಜಿಟಿ ಶಿಕ್ಷಕರು- 40 ವರ್ಷ

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

ಆಯ್ಕೆವಿಧಾನ/ Selection procedure:

ಪಿಜಿಟಿ ಶಿಕ್ಷಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ  ಮಾತ್ರ ನಡೆಸಲಾಗುತ್ತದೆ

 ಪ್ರಿನ್ಸಿಪಾಲರನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ  & ಸಂದರ್ಶನ ನಡೆಸಲಾಗುತ್ತದೆ

ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 01.07.2023 ರಿಂದ 31.07.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು EMRS  ವೆಬ್ ಸೈಟ್ emrs.tribal.gov.in  ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 01-07-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-07-2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31-07-2023

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/  Notification:

ಅರ್ಜಿ ಸಲ್ಲಿಸಿ/ Apply Online: Principal & PGT

ವೆಬ್ಸೈಟ್/ Website :


Click to Share
Bookmark the permalink.

About edutechkannada.com

www.edutechkannada.com Educator

Leave a Reply

Your email address will not be published. Required fields are marked *