ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 285 ಗ್ರೂಪ್ ಡಿ ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ: ಇದರ ಕುರಿತಂತೆ ಮಹತ್ವದ ಪ್ರಕಟಣೆ: Aranya Watcher Selection List 2024

Click to Share

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 285 ಗ್ರೂಪ್ ಡಿ ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ: ಇದರ ಕುರಿತಂತೆ ಮಹತ್ವದ ಪ್ರಕಟಣೆ: Aranya Watcher Selection List 2024

ಕರ್ನಾಟಕ ಸರ್ಕಾರ ಆರಣ್ಯ ಇಲಾಖೆಯ ವತಿಯಿಂದ 2023-24 ನೇ ಸಾಲಿನಲ್ಲಿ 285 ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ & ಉಳಿಕೆ ಮೂಲ ವೃಂದದ ಅರಣ್ಯ ವೀಕ್ಷಕ ಗ್ರೂಪ್ ಡಿ ಹುದ್ದೆಗಳಿಗೆ ನೇರ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 14-02-2024 ರಂದು ಪ್ರಕಟಣೆ ಹೊರಬಿದ್ದಿದೆ. ಸದರಿ ನೇಮಕಾತಿ ಕುರಿತಂತೆ ಪ್ರಸ್ತುತ  ಮೆರಿಟ್ & ಮೀಸಲಾತಿ ನಿಯಮಾವಳಿಗಳನ್ವಯ 1:20 ರಂತೆ ದೈಹಿಕ ಸಹಿಷ್ಣುತೆ & ಸಾಮರ್ಥ್ಯ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಸದರಿ ಪಟ್ಟಿಯನ್ನು ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ವಿವಿಧ ಬೋಧಕ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ

ಕರ್ನಾಟಕ ಸರ್ಕಾರ ಆರಣ್ಯ ಇಲಾಖೆಯ ವತಿಯಿಂದ 2023-24 ನೇ ಸಾಲಿನಲ್ಲಿ 285 ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ & ಉಳಿಕೆ ಮೂಲ ವೃಂದದ ಅರಣ್ಯ ವೀಕ್ಷಕ ಗ್ರೂಪ್ ಡಿ ಹುದ್ದೆಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ಈಗಾಗಲೇ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿರುತ್ತದೆ.

ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಅಧಿಸೂಚನೆಯಲ್ಲಿನ ಷರತ್ತುಗಳನ್ವಯ ದೈಹಿಕ ತಾಳ್ವಿಕ ಪರೀಕ್ಷೆ |Physical Endurance Test), ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ (Physical Efficiency Test) ಹಾಗೂ ದೇಹ ದಾರ್ಡ್ಯತೆ ಪರೀಕ್ಷೆ (Physical Standard Test ಗಳಿಗೆ ಮೆರಿಟ್ ಹಾಗೂ ನೇರ ಮತ್ತು ಸಮತಳ ಬಿಂದುಗಳ ಅನುಸಾರ ಅರ್ಹತೆ ಪಡೆದ ಅಭ್ಯರ್ಥಿಗಳ 1:20 (ಹುದ್ದೆ:ಅಭ್ಯರ್ಥಿ) ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಇಲಾಖೆಯ ಅಂತರ್ಜಾಲ https:// aranya.gov.in/ ದಲ್ಲಿ ನೇಮಕಾತಿ (Recruitment) ಶೀರ್ಷಿಕೆಯಡಿ ಪ್ರಕಟಿಸಲಾಗಿದೆ ಹಾಗೂ ಪ್ರತೀ ಪ್ರವರ್ಗದಲ್ಲಿ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಕೊನೆಯ ಅಭ್ಯರ್ಥಿಯು ಗಳಿಸಿರುವ ಅಂಕಗಳ ಶೇಕಡವಾರು ಮಾಹಿತಿಯ ವಿವರವನ್ನು ಪ್ರಕಟಿಸಲಾಗಿದೆ.

ಮಹಿಳಾ  ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಅಕೌಂಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: WCD Bidar Recruitment 2024

ಈ ಕುರಿತು ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಪೂರಕದಾಖಲಾತಿಗಳೊಂದಿಗೆ ಸ್ಪಷ್ಟ ರೀತಿಯಲ್ಲಿ ವಿವರಿಸಿ ಆಕ್ಷೇಪಣೆಯನ್ನು ಇ-ಮೇಲ್ /ಸ್ಪೀಡ್ ಪೋಸ್ಟ್/ ರಿಜಿಸ್ಟರ್ ಪೋಸ್ಟ್ ಮೂಲಕ ಈ ಕಛೇರಿಗೆ ದಿನಾಂಕ:20-02-2024ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬಹುದಾಗಿರುತ್ತದೆ.

ಈ ಮೇಲೆ ನಿಗದಿಪಡಿಸಿದ ದಿನಾಂಕದ ನಂತರ ಮತ್ತು ಈ ಮೇಲಿನ ವಿಧಾನವನ್ನು ಹೊರತುಪಡಿಸಿ ಇತರೆ ವಿಧಾನ/ಕೊರಿಯರ್ ಮೂಲಕ ಸ್ವೀಕೃತವಾಗುವ ಹಾಗೂ ಅಸ್ಪಷ್ಟ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ 1:20 (ಹುದ್ದೆ ಅಭ್ಯರ್ಥಿ) ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿನ ಅಭ್ಯರ್ಥಿಗಳ ಕುರಿತು ಯಾವುದೇ ಆಕ್ಷೇಪಣೆಗಳು ಯಾರಿಂದಲೂ ಸ್ವೀಕೃತವಾಗದಿದ್ದಲ್ಲಿ, ಸದರಿ ತಾತ್ಕಾಲಿಕ ಪಟ್ಟಿಯನ್ನು ಸರಿಯಾಗಿದೆ ಎಂದು ಪರಿಗಣಿಸಲಾಗುವುದು. ಇನ್ನುಮುಂದೆ, ಈ ಕುರಿತು ಯಾವುದೇ ಆಕ್ಷೇಪಣೆಗಳನ್ನು ಯಾರಿಂದಲೂ ಸ್ವೀಕರಿಸಲಾಗುವುದಿಲ್ಲ.

ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೂಡಲೇ ಕೆಳಗೆ ನೀಡಲಾದ ವೆಬ್ಸೈಟ್ ಗೆ ಬೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆಯಿರಿ. ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಕರ್ನಾಟಕದ ಆಡಳಿತ ತರಬೇತಿ ಸಂಸ್ಥೆಯಲ್ಲಿ ಖಾಲಿ ಇರುವ ಗ್ರೂಪ್ ಸಿ & ಡಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

 

DOWNLOAD THE SELECTION LIST


Click to Share
Bookmark the permalink.

About edutechkannada.com

www.edutechkannada.com Educator

3 Responses to ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 285 ಗ್ರೂಪ್ ಡಿ ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ: ಇದರ ಕುರಿತಂತೆ ಮಹತ್ವದ ಪ್ರಕಟಣೆ: Aranya Watcher Selection List 2024

  1. Pingback: ಕೇಂದ್ರಿಯ ವಿದ್ಯಾಲಯ, ವಿಜಯಪುರ ಖಾಲಿ ಇರುವ ಟಿಜಿಟಿ ಶಿಕ್ಷಕರು, ಪ್ರಾಥಮಿಕ ಶಿಕ್ಷಕರು & PGT ಶಿಕ್ಷಕರು ಹುದ್ದೆಗಳ

  2. Pingback: ಭಾರತೀಯ ರೈಲ್ವೇಯಲ್ಲಿ ಖಾಲಿ ಇರುವ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: Southern Railway Non Technical Jobs 2024 - EduTech Ka

  3. Pingback: RDPR ನಲ್ಲಿ ಖಾಲಿ ಇರುವ SDA & FDA ಒಟ್ಟು 300 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ: RDPR SDA & FDA Recruitment 2024 - EduTech Kannada

Leave a Reply

Your email address will not be published. Required fields are marked *