ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸೆಕ್ರೆಟರಿ, ಜೂನಿಯರ್ ಅಕೌಂಟೆಂಟ್ & ಜೆಇ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ: CBSE  Grp A, B & C Recruitment 2024

Click to Share

ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸೆಕ್ರೆಟರಿ, ಜೂನಿಯರ್ ಅಕೌಂಟೆಂಟ್ & ಜೆಇ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ: CBSE  Grp A, B & C Recruitment 2024

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಖಾಲಿ ಇರುವ ಗ್ರೂಪ್ ಎ, ಬಿ & ಸಿ  ಹುದ್ದೆಗಳ ಭರ್ತಿಗೆ  ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. CBSE ನಲ್ಲಿ  ಖಾಲಿ ಇರುವ ಜೂನಿಯರ್ ಅಕೌಂಟೆಂಟ್, ಅಸಿಸ್ಟೆಂಟ್ ಸೆಕ್ರೆಟರಿ & ಅಕೌಂಟೆಂಟ್ ಸೇರಿದಂತೆ ಒಟ್ಟು 118 ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಅರ್ಜಿ ಸಲ್ಲಿಸಲು 11-04-2024 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISc) ಯಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Central Board of Secondary Education (CBSE) ನಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಕರ್ನಾಟಕ ವಿಧಾನಮಂಡಲದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ &  ಡಾಟಾ ಎಂಟ್ರ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ:

ಇಲಾಖೆ/ ಸಂಸ್ಥೆ: Central Board of Secondary Education

ಹುದ್ದೆಗಳ ಹೆಸರು: Group A, B & C

ಹುದ್ದೆಗಳ ಸಂಖ್ಯೆ- 118

ಕೆಲಸದ ಸ್ಥಳ: All India

ಹುದ್ದೆಗಳ ಹಂಚಿಕೆ/ Vacancy Details:

ಅಸಿಸ್ಟೆಂಟ್ ಸೆಕ್ರೆಟರಿ (ಆಡಳಿತ) 18
ಅಸಿಸ್ಟೆಂಟ್ ಸೆಕ್ರೆಟರಿ (ಅಕಾಡೆಮಿಕ್ಸ್) 16
ಅಸಿಸ್ಟೆಂಟ್ ಸೆಕ್ರೆಟರಿ (ಕೌಶಲ್ಯ ಶಿಕ್ಷಣ) 08
ಅಸಿಸ್ಟೆಂಟ್ ಸೆಕ್ರೆಟರಿ (ತರಬೇತಿ) 22
ಅಕೌಂಟ್ಸ್ ಆಫೀಸರ್ 03
ಜೂನಿಯರ್ ಇಂಜಿನಿಯರ್ 17
ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ 07
ಅಕೌಂಟೆಂಟ್ 07
ಜೂನಿಯರ್ ಅಕೌಂಟೆಂಟ್ 20
ಒಟ್ಟು ಹುದ್ದೆಗಳು 118

ವೇತನ ಶ್ರೇಣಿ:

ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ವೇತನ & ಭತ್ಯೆಗಳು ದೊರೆಯುತ್ತವೆ.

 

ಶೈಕ್ಷಣಿಕ ಅರ್ಹತೆಗಳು:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ ನಿಗದಿಪಡಿಸಿದ ವಿಷಯದಲ್ಲಿ 12ನೇ ತರಗತಿ/ ಪದವಿ/ ಸ್ನಾತಕೋತ್ತರ ಪದವಿ/ ಡಿಪ್ಲೋಮಾ/ ಬಿಇ/ ಬಿಟೆಕ್/  ಮಂತಾದ ವಿದ್ಯಾರ್ಹತೆ ಮುಗಿಸಿದವರಿಗ ಉದ್ಯೋಗಾವಕಾಶಗಳು ಇವೆ. ಹೆಚ್ಚಿನ ವಿವರಗಳಿಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.

 

ವಯೋಮಿತಿ/ Age limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.

 ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ  :

ಗ್ರೂಪ್ ಎ ಹುದ್ದೆಗಳಿಗೆ: ರೂ. 1500/-

ಗ್ರೂಪ್ ಬಿ ಹುದ್ದೆಗಳಿಗೆ: ರೂ. 800/-

ಪ.ಜಾ/ ಪಪಂ/ ಮಹಿಳೆ/ Ex-SM/ PwBD/ CBSC ಯ ಖಾಯಂ ಉದ್ಯೋಗಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.

ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು

 

ಆಯ್ಕೆವಿಧಾನ:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಮೌಖಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ

 ಅರ್ಜಿ ಹಾಕುವ ವಿಧಾನ:

ಆಸಕ್ತರು ಅರ್ಜಿಗಳನ್ನು ದಿನಾಂಕ 12.03.2024 ರಿಂದ 11.04.2024 ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ವೆಬ್ ಸೈಟ್ www.cbsc.nic.in    ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಗ್ರಾಮ ಪಂಚಾಯತ್ ಗಳಲ್ಲಿ ಖಾಲಿ ಇರುವ ಲೈಬ್ರೆರಿ ಸಹಾಯಕ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 12-03-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-04-2024

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

Apply Online

Official Website


Click to Share
Bookmark the permalink.

About edutechkannada.com

www.edutechkannada.com Educator

2 Responses to ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸೆಕ್ರೆಟರಿ, ಜೂನಿಯರ್ ಅಕೌಂಟೆಂಟ್ & ಜೆಇ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ: CBSE  Grp A, B & C Recruitment 2024

  1. Pingback: RDPR ನಲ್ಲಿ ಖಾಲಿ ಇರುವ SDA & FDA ಒಟ್ಟು 300 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ: RDPR SDA & FDA Notified 2024 - EduTech Kannada

  2. Pingback: RDPR ಇಲಾಖೆಯಲ್ಲಿ ಖಾಲಿ ಇರುವ 247 PDO ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ: RDPR PDO Notification out 2023 - EduTech Kannada

Leave a Reply

Your email address will not be published. Required fields are marked *