SDA, FDA, ವಾಹನ ಚಾಲಕ & ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ: ಡಿಸಿಸಿ ಬ್ಯಾಂಕ್ ನಲ್ಲಿ ನೇರ ನೇಮಕಾತಿ- CDCC Bank Recruitment 2023
ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಒಟ್ಟು 68 FDA, SDA, ಚಾಲಕರು & ಇನ್ನಿತರ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ವೆಬ್ಸೈಟ್ ನಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 16-10-2023 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
ಜಿಲ್ಲಾ ಪಂಚಾಯತ್ ನ ನರೇಗಾ ಸ್ಕೀಮ್ ನಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ಭರ್ತಿಗೆ ಅಧಿಸೂಚನೆ: ವೇತನ ರೂ. 26000/-
Chitradurga District Central Cooperative Bank ನಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ/ Post Details:
KAPL ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: ವೇತನ ರೂ. 40000-60000-
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಸಹಾಯಕ ಪ್ರಧಾನ ವ್ಯವಸ್ಥಾಪಕರು | 06 |
ಪ್ರಥಮ ದರ್ಜೆ ಗುಮಾಸ್ತರು | 09 |
ದ್ವಿತೀಯ ದರ್ಜೆ ಸಹಾಯಕರು | 35 |
ಕಂಪ್ಯೂಟರ್ ಇಂಜಿನಿಯರ್ | 02 |
ವಾಹನ ಚಾಲಕರು | 02 |
ಅಟೆಂಡರ್ಸ್ / ಸಹಾಯಕರು | 14 |
ಒಟ್ಟು ಹುದ್ದೆಗಳು | 68 ಹುದ್ದೆಗಳು |
ವೇತನ/ Salary
ಸಹಾಯಕ ಪ್ರಧಾನ ವ್ಯವಸ್ಥಾಪಕರು- 40900-78200 |
ಪ್ರಥಮ ದರ್ಜೆ ಗುಮಾಸ್ತರು- 37900-70850 |
ದ್ವಿತೀಯ ದರ್ಜೆ ಸಹಾಯಕರು- 30350-58250 |
ಕಂಪ್ಯೂಟರ್ ಇಂಜಿನಿಯರ್- 30350-58250 |
ವಾಹನ ಚಾಲಕರು- 27650-52650 |
ಅಟೆಂಡರ್ಸ್ / ಸಹಾಯಕರು- 23500-47650 |
ಕರ್ನಾಟಕ ಸರ್ಕಾರದ ವೇತನ ನಿಯಮಾವಳಿಗಳ ಪ್ರಕಾರ ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಕೆಳಗೆ ನೀಡಲಾಗಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಸಹಾಯಕ ವ್ಯವಸ್ಥಾಪಕರು- ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಪ್ರಥಮ ದರ್ಜೆ ಸಹಾಯಕರು: ಸಹಾಯಕ ವ್ಯವಸ್ಥಾಪಕರು- ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ದ್ವಿತೀಯ ದರ್ಜೆ ಸಹಾಯಕ/ SDA : ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಟ 50% ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಕಂಪ್ಯೂಟರ್ ಇಂಜಿನಿಯರ್: ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಟ 50% ಅಂಕಗಳೊಂದಿಗೆ ಕಂಪ್ಯೂಟರ್ ವಿಷಯದಲ್ಲಿ ಎಂಎಸ್ಸಿ/ ಬಿಇ ಅಥವಾ ಎಂಸಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಾಹನ ಚಾಲಕ: ಹತ್ತನೇ ತರಗತಿ ಉತ್ತೀರ್ಣ & ವಾಹನ ಚಾಲನ ಪರವಾನಗಿ
ಅಟೆಂಡರ್ಸ್ / ಸಹಾಯಕರು: ಹತ್ತನೇ ತರಗತಿ ಉತ್ತೀರ್ಣ.
ಅರ್ಜಿ ಶುಲ್ಕ/ Application Fees:
ಸಾಮಾನ್ಯ ಅರ್ಹತಾ & ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ: ರೂ. 1500/-
ಪ.ಜಾ/ ಪಪಂ/ ಕೆ1/ ಅಂಗವಿಕಲ / ಮಾಜಿ ಸೈನಿಕ/ ವಿಧವಾ ಸೇರಿದ ಅಭ್ಯರ್ಥಿಗಳಿಗೆ : ರೂ. 750/-
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬಹುದು.
ವಯೋಮಿತಿ/ Age limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ / ಸಂದರ್ಶನವನ್ನು ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/ Application Submission Method:
ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 15.09.2023 ರಿಂದ 16.10.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಬ್ಯಾಂಕಿನ ವೆಬ್ ಸೈಟ್ www.chitradurgadccbank.com ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ..
RBI ನಲ್ಲಿ ಖಾಲಿ ಇರುವ 450 ಸಹಾಯಕ ಹುದ್ದೆಗಳ ನೇಮಕಾತಿಗೆ Online ಅರ್ಜಿ ಆಹ್ವಾನ: RBI Recruitment 2023
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 15-09-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:16-10-2023
ಅರ್ಜಿ ಪಾವತಿಸುವ ಕೊನೆಯ ದಿನಾಂಕ: 16-10-2023
Important Links/ ಪ್ರಮುಖ ಲಿಂಕುಗಳು: