ಕೃಷಿ ಇಲಾಖೆಯಿಂದ 360 ಕ್ಕೂ ಹೆಚ್ಚು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿ: Dept of Agriculture AAO Jobs 2023

Click to Share

ಕೃಷಿ ಇಲಾಖೆಯಿಂದ 360 ಕ್ಕೂ ಹೆಚ್ಚು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿ:

ಕೃಷಿ ಇಲಾಖೆಯಿಂದ ಶೀಘ್ರದಲ್ಲಿಯೇ 1000 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದ ಕೃಷಿ ಸಚಿವ ಎನ್ ಚೆಲುವರಾಯಸ್ವಾಮೀ ತಿಳಿಸಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಕೃಷಿ ಇಲಾಖೆ ಕಾರ್ಯ ನಿರ್ವಹಣೆ ಮಾಡಲು ಸಿಬ್ಬಂದಿಗಳ ಕೊರತೆ ಇದೆ. ಅದನ್ನು ನೀಗಿಸಲು ನೇಮಕಾತಿಯನ್ನು ತ್ವರಿತವಾಗಿ ಮಾಡಿಕೊಳ್ಳಬೇಕಾಗಿದೆ.

ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹತ್ತನೇ ಪಾಸದವರಿಂದ ಅರ್ಜಿ ಆಹ್ವಾನ: APPOST Recruitment 2023

ಈ ನೇಮಕಾತಿಗಾಗಿ ಸಾವಿರಾರು ಅಭ್ಯರ್ಥಿಗಳು ಎದುರು ನೋಡುತ್ತಿದ್ದಾರೆ, ಅವರಿಗೆಲ್ಲಾ ರಾಜ್ಯ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, ಶೀಘ್ರದಲ್ಲಿಯೇ ಈ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ ಎಂಬ ಅಂಶವನ್ನು ಸಚಿವರು ತಿಳಿಸಿದ್ದಾರೆ.

IGNOU ದಲ್ಲಿ ಖಾಲಿ ಇರುವ 35 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗ್ರಾಮೀಣ ಪ್ರದೇಶದ ಹಂತದಲ್ಲಿ 368 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಈ ಹಿಂದೆ ಕೆಪಿಎಸ್ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಆದರೆ ಮೀಸಲಾತಿಯ ಕುರಿತು ಉದ್ಭವವಾದ ಹೊಸ ಗೊಂದಲಗಳನ್ನು ಪರಿಶೀಲಿಸಿ ಕಳುಹಿಸಲು ಕೆಪಿಎಸ್ಸಿಯಿಂದ ಪ್ರಸ್ತಾವನೆ ವಾಪಸ್ಸು ಹಿಂದಿರುಗಿಸಲಾಯಿತು.

 ಪ್ರಸ್ತುತ 2000 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕೃಷಿ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಅನುಮೋದನೆಗೊಂಡ ನಂತರ ಮೊದಲನೇ ಹಂತದಲ್ಲಿ 1000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಖಾಲಿ ಇರುವ 808 ಉಪನ್ಯಾಸಕರು & ಶಿಕ್ಷಕರು ಹುದ್ದೆಗಳ ನೇಮಕಾತಿ

ಈ ನೇಮಕಾತಿಗೆ ಬಿಎಸ್ಸಿ ಕೃಷಿ ಪದವಿ ಮುಗಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಕೆಪಿಎಸ್ಸಿಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂಬಂಧಿಸಿದ ವಿದ್ಯಾರ್ಹತೆ ಪೂರ್ಣಗೊಳಿಸಿದವರು ಸಿದ್ದತೆಯನ್ನು ಮಾಡಿಕೊಳ್ಳಿ, ಯಾವುದೇ ಕ್ಷಣದಲ್ಲಾದರೂ ಇದರ ಅಧಿಸೂಚನೆ ಹೊರಬೀಳಬಹುದಾಗಿದೆ.


Click to Share
Bookmark the permalink.

About edutechkannada.com

www.edutechkannada.com Educator