ಯಾವುದೇ ಪದವಿ ಮುಗಿದವರಿಂದ 4045 ಕ್ಲರ್ಕ್ ಹುದ್ದೆಗಳಿಗೆ Online ಮೂಲಕ ಅರ್ಜಿ ಆಹ್ವಾನ: IBPS Recruitment 2023

Click to Share

ಯಾವುದೇ ಪದವಿ ಮುಗಿದವರಿಂದ 4045 ಕ್ಲರ್ಕ್ ಹುದ್ದೆಗಳಿಗೆ Online ಮೂಲಕ ಅರ್ಜಿ ಆಹ್ವಾನ: IBPS Recruitment 2023

Institute of Banking Personnel Selection ನಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ದೇಶದ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ 4045 ಕ್ಲರ್ಕ್  ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು IBPS ವೆಬ್ಸೈಟ್ ನಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 21 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

 

ವೇತನ/ Salary

ರೂ. 19900-42600 

ಈ ವೇತನದ ಜೊತೆಗೆ DA/ HRA ಮುಂತಾದ ಸೌಲಭ್ಯಗಳು ಬ್ಯಾಂಕಿನ ನಿಯಮಗಳನ್ವಯ ದೊರೆಯುತ್ತವೆ.

 

ವಯೋಮಿತಿ/ Age limit: (As on 01-07-2023)

ಕನಿಷ್ಟ ವಯೋಮಿತಿ : 20 ವರ್ಷ ಪೂರೈಸಿರಬೇಕು 

ಗರಿಷ್ಟ ವಯೋಮಿತಿ: 28 ವರ್ಷವನ್ನು ಮೀರಿರಬಾರದು.

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

 

ಶೈಕ್ಷಣಿಕ ಅರ್ಹತೆಗಳು/ Educational Qualification:

ದಿನಾಂಕ 21-07-2023 ರ ಒಳಗಾಗಿ ಯಾವುದೇ ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಅಥವಾ ಯಾವುದೇ ವಿಷಯದಲ್ಲಿ (Any Degree) ಪದವಿ ಉತ್ತೀರ್ಣ ಹೊಂದಿರಬೇಕು. ಯಾವುದೇ ಅನುಭವ ಬೇಕಾಗಿಲ್ಲ

ಅರ್ಜಿ ಶುಲ್ಕ/ Application Fees:

ಸಾಮಾನ್ಯ/ OBC/ EWS ಅರ್ಹತಾ ಅಭ್ಯರ್ಥಿಗಳಿಗೆ: ರೂ. 850

ಪ.ಜಾ/ ಪಪಂ/ ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 175/-

ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.

 

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಕೆಳಕಂಡಂತೆ ಆಯ್ಕೆ ಮಾಡಲಾಗುತ್ತದೆ.

ಪೂರ್ವಭಾವಿ ಪರೀಕ್ಷೆ (Preliminary Examination)

ಮುಖ್ಯ ಪರೀಕ್ಷೆ (Mains Exam)

ಪೂರ್ವಭಾವಿ & ಮುಖ್ಯ ಪರೀಕ್ಷೆಯು ಕನ್ನಡ, ಇಂಗ್ಲೀಷ್ & ಹಿಂದಿ ಸೇರಿದಂತೆ ವಿವಿಧ ಸ್ಥಳೀಯ ಭಾಷೆಗಳಲ್ಲಿ ನಡೆಯಲಿದ್ದು, ತಾವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಯ್ಕೆಮಾಡಬಹುದು. 

 

ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ONLINE ಅರ್ಜಿಗಳನ್ನು ದಿನಾಂಕ 01.07.2023 ರಿಂದ 21.07.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು IBPS ನ  ವೆಬ್ ಸೈಟ್ www.ibps.in  ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ  ಹಾಕಿ

 

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 01-07-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-07-2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 21-07-2023

ಪೂರ್ವಭಾವಿ ಪರೀಕ್ಷಾ ದಿನಾಂಕ:: ಆಗಸ್ಟ್/ಸೆಪ್ಟಂಬರ್, 2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification: Download

ಅರ್ಜಿ ಸಲ್ಲಿಸಿ/ Apply Online: Click here

ವೆಬ್ಸೈಟ್/ Website :

 

 


Click to Share
Tagged , , , . Bookmark the permalink.

About edutechkannada.com

www.edutechkannada.com Educator