ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಾಲ್ಕು ಇಲಾಖೆಗಳಲ್ಲಿನ 670 ಹುದ್ದೆಗಳ ನೇಮಕಾತಿ ಕುರಿತಂತೆ ಮಹತ್ವದ ಮಾಹಿತಿ ಬಿಡುಗಡೆ: KEA 4 Dept Jobs Objections 2024

Click to Share

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಾಲ್ಕು ಇಲಾಖೆಗಳಲ್ಲಿನ 670 ಹುದ್ದೆಗಳ ನೇಮಕಾತಿ ಕುರಿತಂತೆ ಮಹತ್ವದ ಮಾಹಿತಿ ಬಿಡುಗಡೆ: KEA 4 Dept Jobs Objections 2024

ಕೆಎಸ್‌ಇಡಿಸಿ/ಕೆಎಫ್‌ಪಿಎಸ್‌ಸಿ/ಕೆಬಿಸಿಡಬ್ಲ್ಯಬಿ/ಎಂಎಸ್‌ಐಎಲ್ 2023 ಸಂಬಂಧಿಸಿದಂತೆ ನಡೆದ ಪರೀಕ್ಷೆಗಳ ಪರಿಷ್ಕೃತ ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ತಮ್ಮ ಉಳಿದ ಪ್ರವೇಶ ಪತ್ರಗಳನ್ನು ಪರೀಕ್ಷೆ ಬರೆದ ಕೇಂದ್ರದಲ್ಲಿ ಸಲ್ಲಿಸಬೇಕೆಂದು ಸೂಚಿಸಲಾಗಿತ್ತು. ಆದರೂ ಅನೇಕ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಪರೀಕ್ಷಾ ಕೇಂದ್ರದಲ್ಲಿ ಸಲ್ಲಿಸಿರುವುದಿಲ್ಲ. ದಿನಾಂಕ. 07.03.2024ರಂದು ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆ ಮಾಡಿ, ಯಾವುದಾದರು ಅಭ್ಯರ್ಥಿಯ ವಿಷಯವಾರು ಫಲಿತಾಂಶ ಕಾಣದಿದ್ದಲ್ಲಿ ನೀಡಲಾಗಿದ್ದ ಲಿಂಕ್ ಮೂಲಕ ಸಂಪೂರ್ಣ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕೆಂದು ತಿಳಿಸಲಾಗಿತ್ತು. ಆದರೂ ಬಹಳಷ್ಟು ಅಭ್ಯರ್ಥಿಗಳು ಯಾವುದೇ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ.

ಭಾರತೀಯ ಜೀವ ವಿಮಾ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಈ ಮೇಲೆ ತಿಳಿಸಲಾದ ವಿಷಯಕ್ಕೆ ಸಂಬಂದಿಸಿದಂತೆ ಕೆಇಎ ವೆಬ್ಸೈಟ್ ನಲ್ಲಿ ನೀಡಿರುವ ಲಿಂಕ್‌ನಲ್ಲಿ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಲಿಂಕ್‌ನಲ್ಲಿ ಅರ್ಜಿ ಸಂಖ್ಯೆ, ಅರ್ಜಿದಾರರ ಹೆಸರು, ಜನ್ಮ ದಿನಾಂಕ ನಮೂದಿಸಿದ ನಂತರ ಈಗಾಗಲೇ ನೊಂದಣಿ ಮಾಡಿರುವ ಮತ್ತು ಅಂಕಗಳು ಪ್ರಕಟವಾಗಿರುವ ಅಭ್ಯರ್ಥಿಗಳು Login for Registered Applicant ಬಟನ್ ಕ್ಲಿಕ್ ಮಾಡುವುದು

ವಿವಿಧ ರೀತಿಯ ಆಕ್ಷೇಪಣೆಗಳನ್ನು ಸಲ್ಲಿಸುವುದು ಹೇಗೆ?

Login for Registered Applicant ಬಟನ್ ಕ್ಲಿಕ್ ಮಾಡಿದ ನಂತರ ಅಭ್ಯರ್ಥಿಯು ತಮ್ಮ ಪರಿಷ್ಕೃತ ಅಂಕಗಳನ್ನು ನೋಡಬಹುದು. ಯಾವುದೇ ವಿಷಯದ ಸ್ಕೋರ್ ತಪ್ಪಾಗಿದ್ದರೆ / ನವೀಕರಿಸುವ ಅಗತ್ಯವಿದೆ ಎನಿಸಿದರೇ ಈ ಕೆಳಗಿನ ಕ್ರಮಗಳನ್ನು ವಹಿಸಿ ಆಕ್ಷೇಪಣೆಗಳನ್ನು ಸಲ್ಲಿಸುಬೇಕು:

ಕರ್ನಾಟಕ ಕೈಗಾರಿಕೆ & ವಾಣಿಜ್ಯ ಇಲಾಖೆಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: ಪದವಿ ಮುಗಿದವರಿಗೆ ವಿವಿಧ ಉದ್ಯೋಗಾವಕಾಶಗಳು

ಆಕ್ಷೇಪಣೆ ಇರುವ ವಿಷಯವನ್ನು ಆಯ್ಕೆ ಮಾಡಿದ ಕೂಡಲೇ ರಿಜಿಸ್ಟರ್ ಸಂಖ್ಯೆ, ಪ್ರಶ್ನೆ ಪತ್ರಿಕೆ ವರ್ಷನ್ ಕೋಡ್ ಮತ್ತು ಅಂಕಗಳನ್ನು ನೋಡಬಹುದು. ಅಭ್ಯರ್ಥಿಯ ಪ್ರಕಾರ ತಮಗೆ ಲಭಿಸಬೇಕಾಗಿರುವ ಅಂಕಗಳನ್ನು ನಮೂದು ಮಾಡಿ, ಪ್ರವೇಶ ಪತ್ರ ಮತ್ತು ಓಎಂಆರ್ ಪ್ರತಿಯನ್ನು ಒಂದೇ ಪಿಡಿಎಫ್‌ನಲ್ಲಿ ಸ್ಕಾನ್ ಮಾಡಿ ಅಪ್‌ಲೋಡ್ ಮಾಡುವುದು.

Candidates not yet received results /ಇನ್ನು ಫಲಿತಾಂಶ ಪ್ರಕಟವಾಗದ ಅಭ್ಯರ್ಥಿಗಳು: ಅಂಕಗಳು ಪ್ರಕಟವಾಗದಿರುವ ಅಭ್ಯರ್ಥಿಗಳು Candidates not yet received results /ಇನ್ನು ಫಲಿತಾಂಶ ಪ್ರಕಟವಾಗದ ಅಭ್ಯರ್ಥಿಗಳು ಅನ್ನು ಕ್ಲಿಕ್ ಮಾಡಿ ಆಕ್ಷೇಪಣೆಗಳನ್ನು ಈ ಕೆಳಗಿನ ಕ್ರಮಗಳನ್ನು ವಹಿಸಿ ಸಲ್ಲಿಸಬಹುದು.

ಫಲಿತಾಂಶ ಪ್ರಕಟವಾಗದೇ ಇರುವ ಇಲಾಖೆ, ಹುದ್ದೆ, ವಿಷಯ ಆಯ್ಕೆ ಮಾಡಿ ನಂತರ ತಮ್ಮ ಅರ್ಜಿ ಸಂಖ್ಯೆ, ಹೆಸರು, ರಿಜಿಸ್ಟರ್‌ ಸಂಖ್ಯೆಯನ್ನು, ಪ್ರಶ್ನೆ ಪತ್ರಿಕೆ ವರ್ಷನ್ ಕೋಡ್ ಅನ್ನು ನಮೂದಿಸಬೇಕು.

ತದನಂತರ ಆಕ್ಷೇಪಣೆಗೆ ಇರುವ ಕಾರಣವನ್ನು ನಮೂದಿಸಿ, ಪ್ರವೇಶ ಪತ್ರ ಮತ್ತು ಓಎಂಆರ್ ಪ್ರತಿಯನ್ನು ಒಂದೇ ಪಿಡಿಎಫ್‌ನಲ್ಲಿ ಸ್ಕಾನ್ ಮಾಡಿ ಅಪ್‌ಲೋಡ್ ಮಾಡುವುದು.

ಕರ್ನಾಟಕದ ಆಹಾರ ಸಂಶೋಧನಾಲಯ ದಲ್ಲಿ ಖಾಲಿ ಇರುವ ಹುದ್ದೆಗಳ ಅಸೋಸಿಯೇಟ್ II ನೇಮಕಾತಿಗೆ ಅರ್ಜಿ ಆಹ್ವಾನ: ವೇತನ ರೂ. 56000/-

ಪ್ರಮುಖ ದಿನಾಂಕಗಳು/Important Dates:

ಲಿಂಕ್‌ನಲ್ಲಿ ಆಕ್ಷೇಪಣೆಗಳನ್ನು ದಿನಾಂಕ 22.03.2024 ರಿಂದ 29.03.2024ರ (ಸಂಜೆ 5.30 ವರೆಗೂ) ಸಲ್ಲಿಸಬಹುದು.

ವಿಶೇಷ ಸೂಚನೆ: ಆಕ್ಷೇಪಣೆಗಳನ್ನು ಈ ಮೇಲೆ ತಿಳಿಸಿರುವ ಲಿಂಕ್‌ನಲ್ಲಿ ಮಾತ್ರ ಕಡ್ಡಾಯವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿವುದು. ಇನ್ನಿತರೆ ವಿಧದ ಇ-ಮೇಲ್/ ಅಂಚೆ ಅಥವಾ ಖುದ್ದಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಲ್ಲಿ, ಅವುಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ಸರ್ಕಾರದ ನಾಲ್ಕು ಇಲಾಖೆ/ ಸಂಸ್ಥೆಗಳ 670 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಕುರಿತಂತೆ ಯಾವುದೇ ಆಕ್ಷೇಪಣೆಗಳು ಇದ್ದರೂ ದಿನಾಂಕ 29-03-2024 ರ ಒಳಗಾಗಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಕೂಡಲೇ ಕೆಇಎ ವೆಬ್ಸೈಟ್ ಗೆ ಬೇಟಿ ನೀಡಿ. ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

IMPORTANT LINKS:

Notice

Objection Form

Official Website


Click to Share
Bookmark the permalink.

About edutechkannada.com

www.edutechkannada.com Educator

2 Responses to ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಾಲ್ಕು ಇಲಾಖೆಗಳಲ್ಲಿನ 670 ಹುದ್ದೆಗಳ ನೇಮಕಾತಿ ಕುರಿತಂತೆ ಮಹತ್ವದ ಮಾಹಿತಿ ಬಿಡುಗಡೆ: KEA 4 Dept Jobs Objections 2024

  1. Pingback: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: UAS Blr Teaching Recruitment 2024 - EduTech Kannad

  2. Pingback: ಜಿಲ್ಲಾಧಿಕಾರಿಗಳ ಕಾರ್ಯಾಲಯಗಳಲ್ಲಿ ಖಾಲಿ ಇರುವ ಕಛೇರಿ ಸಹಾಯಕ, ಡಿಇಓ & ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ: KSRLPS S

Leave a Reply

Your email address will not be published. Required fields are marked *