ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 1752 ನಿರ್ವಾಹಕ & ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ: KKRTC KEA Recruitment 2024
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. KKRTC ಯಲ್ಲಿ ಖಾಲಿ ಇರುವ ನಿರ್ವಾಹಕ & ಲೆಕ್ಕಿಗ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಒಟ್ಟು 1752 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದ್ದು, ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು KEA ವೆಬ್ಸೈಟ್ ನಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಶೀಘ್ರದಲ್ಲಿಯೇ ಲಿಂಕ್ ಪ್ರಕಟವಾಗಲಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
247 ಗೃಹ ರಕ್ಷಕ ಹುದ್ದೆಗಳ ಬೃಹತ್ ಭರ್ತಿಗೆ 10ನೇ ಮುಗಿದವರಿಂದ ಅರ್ಜಿ ಆಹ್ವಾನ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (KKRTC) ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ 2250 RPF ಹುದ್ದೆಗಳ ಭರ್ತಿಗೆ ಅಧಿಸೂಚನೆ
ಹುದ್ದೆಗಳ ವಿವರವನ್ನು ಗಮನಿಸಿ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ನಿರ್ವಾಹಲ | 1737 |
ಸಹಾಯಕ ಲೆಕ್ಕಿಗ | 15 |
ಒಟ್ಟು ಹುದ್ದೆಗಳು | 1752 |
ವೇತನ ಶ್ರೇಣಿ:
ಕರ್ನಾಟಕ ಸರ್ಕಾರದ ನಿಯಮಾವಳಿಗಳ ಅನ್ವಯ ಹುದ್ದೆಗಳ ಅನುಸಾರ ಮೂಲ ವೇತನ ನಿಗದಿಪಡಿಸಲಾಗಿದೆ & ತುಟ್ಟಿಭತ್ಯೆ, ಮನೆಬಾಡಿಗೆ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳು ನಿಯಮಾನುಸಾರ ದೊರೆಯುತ್ತವೆ.
ವಿದ್ಯಾರ್ಹತೆ ಏನಿರಬೇಕು?
ಹುದ್ದೆಗಳಿಗೆ ಅನುಸಾರ ಅಂಗೀಕೃತ ಬೋರ್ಡ್/ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ, ಪಿಯುಸಿ, ಪದವಿ, ಮುಗಿಸಿದವರಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ತುಂಬಿರಬೇಕು
ಅಭ್ಯರ್ಥಿಗಳು ಗರಿಷ್ಟ ಅಂದರೇ 35 ವರ್ಷದವರೆಗೆ ಅರ್ಜಿ ಸಲ್ಲಿಸಬಹುದು.
ಗರಿಷ್ಟ ವಯೋಮಿತಿಯ ಸಡಿಲಿಕೆ:
ಪಜಾ/ ಪಪಂ : 05 ವರ್ಷ
2ಎ/ 2ಬಿ/ 3ಎ/ 3ಬಿ : 03 ವರ್ಷ
ವಿಕಲಚೇತನ ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ | ರೂ. 500/- |
2ಎ, 2ಬಿ, 3ಎ & 3ಬಿ | ರೂ. 300/- |
ಎಸ್.ಸಿ ,ಎಸ್.ಟಿ & ಪ್ರವರ್ಗ 1 | ರೂ. 200/- |
ವಿಕಲಚೇತನರು & ಮಾಜಿ ಸೈನಿಕರು | ರೂ. 100/- |
ಆಯ್ಕೆ ವಿಧಾನ ಹೇಗಿರುತ್ತೆ?
ಸ್ಪರ್ಧಾತ್ಮಕ ಪರೀಕ್ಷೆ/ ಕೌಶಲ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಹಾಕುವುದು ಹೇಗೆ?
ಅರ್ಹ & ಆಸಕ್ತ ಅಭ್ಯರ್ಥಿಗಳು KEA ಅಧಿಕೃತ ವೆಬ್ಸೈಟ್ kea.kar.nic.in ವೆಬ್ಸೈಟ್ ನಲ್ಲಿ ಶೀಘ್ರದಲ್ಲಿಯೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
BEL ನಲ್ಲಿ ಖಾಲಿ ಇರುವ 115 ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ದಿನಾಂಕಗಳು:
ಪ್ರಾರಂಭದ ದಿನಾಂಕ: ಶೀಘ್ರದಲ್ಲೆ
ಅರ್ಜಿ ಆನ್ಲೈನ್ ಮೂಲಕ ಸಲ್ಲಿಸುವ ಕೊನೆಯ ದಿನಾಂಕ: ಶೀಘ್ರದಲ್ಲೆ
ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕ: ಶೀಘ್ರದಲ್ಲೆ
ಅಧಿಕೃತ ಲಿಂಕ್/ Official Links:
Pingback: ಕರ್ನಾಟಕ ಇಂಧನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ- ವೇತನ ರೂ. 60500/- KERC Recruitment Notification 2024 - EduTech Kannada