ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1700 ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿ: Revenue VA  Recruitment Notification 2023

Click to Share

ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1700 ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿ: Revenue VA  Recruitment Notification 2023

ನಮಸ್ತೆ ಸ್ನೇಹಿತರೇ, ಗ್ರಾಮ ಲೆಕ್ಕಿಗ ಹುದ್ದೆಗಳ ಆಕಾಂಕ್ಷಿಗಳಿಗೆ ಶುಭ ಸುದ್ದಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ  ಗ್ರಾಮ ಲೆಕ್ಕಿಗರ ಹುದ್ದೆಗಳ ಬೃಹತ್ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 1700 ಗ್ರಾಮ ಲೆಕ್ಕಿಗರ ನೇಮಕಾತಿ ಮಾಡಿಕೊಳ್ಳಲು ಈ ಬಾರಿ ಹೊಸ ನಿಯಮಗಳನ್ನು ರೂಪಿಸಿದೆ. ಇಲ್ಲಿಯವರೆಗೂ ಜಿಲ್ಲಾ ಹಂತದಲ್ಲಿ ನೇಮಕಾತಿ ನಡೆಯುತ್ತಿತ್ತು & ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತಿತ್ತು ಆದರೆ ಇನ್ನು ಮುಂದೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ರಾಜ್ಯದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳ ಭರ್ತಿಗೆ ವಿಶೇಷ ನಿಯಮಾವಳಿಗಳನ್ನು ರೂಪಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಆಯ್ಕೆ ಪ್ರಾಧಿಕಾರವನ್ನಾಗಿ ನೇಮಿಸಿದೆ.

ಜಲ ಅಭಿವೃದ್ಧಿ ನಿಗಮದ ವತಿಯಿಂದ ನೇಮಕಾತಿ ಅಧಿಸೂಚನೆ ಪ್ರಕಟ- ವೇತನ ರೂ. 68000/- NWDA Recruitment 2023

ರಾಜ್ಯದಲ್ಲಿ  ಖಾಲಿ ಇರುವ 1700 ಗ್ರಾಮ ಲೆಕ್ಕಿಗರ  ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಲಾಗುವುದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಕರ್ನಾಟಕ ಕಂದಾಯ ಇಲಾಖೆಯಿಂದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ.

ಕರ್ನಾಟಕ ಇಂಧನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ- ವೇತನ ರೂ. 60500/-  KERC Recruitment 2023

ಹುದ್ದೆಗಳ ವಿವರ/ Post Details:

ಇಲಾಖೆ/ ಸಂಸ್ಥೆ: ಕಂದಾಯ ಇಲಾಖೆ
ಹುದ್ದೆಗಳ ಹೆಸರು: ಗ್ರಾಮ ಲೆಕ್ಕಿಗರು/ Village Accountant
ಒಟ್ಟು ಹುದ್ದೆಗಳು: 1700
ಕೆಲಸದ ಸ್ಥಳ: ಕರ್ನಾಟಕ

ವೇತನ ಶ್ರೇಣಿ

ಮೂಲವೇತನ ರೂ. 21400-42000

ಮೇಲಿನ ಮೂಲವೇತನದ ಜೊತೆಗೆ ರಾಜ್ಯ ಸರ್ಕಾರದ ನಿಯಮಾವಳಿಗಳ ಅನ್ವಯ DA, HRA & ಇನ್ನಿತರ ಭತ್ಯೆಗಳು ದೊರೆಯುತ್ತವೆ.

ಶೈಕ್ಷಣಿಕ ಅರ್ಹತೆಗಳು/ Educational Qualification:

ಗ್ರಾಮ ಲೆಕ್ಕಿಗರು/ Village Accountant:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ ಬೋರ್ಡ್ ನಿಂದ ಪಿಯುಸಿ/ 12ನೇ ಅಥವಾ ತತ್ಸಮಾನ ವಿದ್ಯಾರ್ಹತೆ ಮುಗಿಸಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಅರ್ಜಿ ಶುಲ್ಕ:

ಸಾಮಾನ್ಯ  ಅರ್ಹತಾ ಅಭ್ಯರ್ಥಿಗಳಿಗೆ : ರೂ. 600/-

ಪ್ರವರ್ಗ 2ಎ, 2ಬಿ, 3ಎ & 3ಬಿ ಅಭ್ಯರ್ಥಿಗಳಿಗೆ ರೂ. 300/-

ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 50/-

ಪ.ಜಾ/ ಪಪಂ/ ಪ್ರವರ್ಗ 1/ ಅಂಗವಿಕಲ: ಅರ್ಜಿ ಶುಲ್ಕ ಇರುವುದಿಲ್ಲ.

ವಯೋಮಿತಿ:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18  ವರ್ಷ ಪೂರೈಸಿರಬೇಕು & ಗರಿಷ್ಟ 35 ವರ್ಷ ಮೀರಿರಬಾರದು.

 ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಮಾಜಿ ಸೈನಿಕರಿಗೆ: 05 ವರ್ಷ

ಅರ್ಜಿ ಸಲ್ಲಿಸುವ ವಿಧಾನ:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ನಿಗದಿಪಡಿಸಿದ ದಿನಾಂಕಗಳಂದು ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಪ್ರಾಧಿಕಾರದ  ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.

ಕ್ಲರ್ಕ್, ಸೆಕ್ಷನ್ ಆಫೀಸರ್ & MTS ಸೇರಿ 154 ಹುದ್ದೆಗಳ ನೇರ ನೇಮಕಾತಿಗೆ ಆನ್ಲೈನ್  ಮೂಲಕ ಅರ್ಜಿ ಆಹ್ವಾನ- NEHU Recruitment 2023

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯು ಬಹು ಆಯ್ಕೆ ಮಾದರಿಯ 100 ಅಂಕಗಳ ಎರಡು ಪತ್ರಿಕೆಗಳನ್ನು ಒಳಗೊಂಡಿದೆ. ಒಟ್ಟು 200 ಅಂಕಗಳಿಗೆ ಪರೀಕ್ಷೆ ಬರೆಯಬೇಕು.

ಪತ್ರಿಕೆ 1 General Knowledge, Computer Knowledge, Kannada Language & English Language ಕುರಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಭಾಗಕ್ಕೂ 25 ಅಂಕಗಳನ್ನು ನಿಗದಿಪಡಿಸಲಾಗಿದೆ.

ಪತ್ರಿಕೆ 2 Arithmetic, Statistics, Logical Reasoning & Revenue Law ಎಂಬ 4 ವಿಭಾಗಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ತಯಾರಿಸಲಾಗುತ್ತದೆ. ಪ್ರತಿ ವಿಭಾಗಕ್ಕೂ 25 ಅಂಕಗಳು ಇರುತ್ತವೆ.

ಪ್ರಶ್ನೆಪತ್ರಿಕೆಯು ಕನ್ನಡ & ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ತಯಾರಾಗುತ್ತದೆ.

ಅರ್ಜಿ ಸಲ್ಲಿಸುವ ದಿನಾಂಕಗಳು:

ಆನ್ಲೈನ್ ಅರ್ಜಿ ಆರಂಭದ ದಿನಾಂಕ:  SOON

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: SOON

Important Links/ ಪ್ರಮುಖ ಲಿಂಕುಗಳು:

Notification/ ನೋಟಿಫಿಕೇಶನ್

Website


Click to Share

2 thoughts on “ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1700 ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿ: Revenue VA  Recruitment Notification 2023”

  1. Pingback: ಬೆಂಗಳೂರಿನಲ್ಲಿರುವ ರೈಲ್ವೇ ಭೂ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: RLDA Recruitment 2023 - EduTech Kan

  2. Pingback: KRCL ನಲ್ಲಿ ಖಾಲಿ ಇರುವ 190 ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ: KRCL Recruitment 2023 - EduTech Kannada

Leave a Comment

Your email address will not be published. Required fields are marked *

Scroll to Top