SSC CHSL Recruitment 2024: ಪಿಯುಸಿ ಅಥವಾ ಡಿಪ್ಲೋಮಾ ಮುಗಿದವರಿಗೆ ಒಟ್ಟು 3712 ಗುಮಾಸ್ತ & ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Click to Share

SSC CHSL Recruitment 2024: ಪಿಯುಸಿ ಅಥವಾ ಡಿಪ್ಲೋಮಾ ಮುಗಿದವರಿಗೆ ಒಟ್ಟು 3712 ಗುಮಾಸ್ತ & ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಿಬ್ಬಂದಿ ನೇಮಕಾತಿ ಆಯೋಗದಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. 2024 ನೇ ಸಾಲಿನಲ್ಲಿ ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (CHSL) ಪರೀಕ್ಷೆಗಾಗಿ ಅಧಿಸೂಚನೆ ಹೊರಡಿಸಲಾಗಿದೆ.  ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 3712  ಲೋವರ್ ಡಿವಿಸನ್ ಕ್ಲರ್ಕ್ & ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 07-05-2024 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು.

ಭೂಮಾಪನ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 384 ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸಿಬ್ಬಂದಿ ನೇಮಕಾತಿ ಆಯೋಗದಿಂದ CHSL ಪರೀಕ್ಷೆಯ ಮೂಲಕ ಗ್ರೂಪ್ ಸಿ ಹುದ್ದೆಗಳಾದ LDC, DEO ಮುಂತಾದ ಖಾಲಿ ಇರುವ ಹುದ್ದೆಗಳ  ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ.

ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಜಿಲ್ಲಾ ನ್ಯಾಯಾಲಯ ತುಮಕೂರಿನಲ್ಲಿ ಖಾಲಿ ಇರುವ ಬೆರಳಚ್ಚು ನಕಲುಗಾರ & ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ/ Post Details:

ಇಲಾಖೆ/ ಸಂಸ್ಥೆ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು

ಹುದ್ದೆಗಳ ಹೆಸರು:  LDC, DEO

ಹುದ್ದೆಗಳ ಸಂಖ್ಯೆ: 3712 ಹುದ್ದೆಗಳು

ಹುದ್ದೆಗಳ ಹೆಸರು: Name of Posts

ಲೋವರ್ ಡಿವಿಸನ್ ಕ್ಲರ್ಕ್/ ಜೂನಿಯರ್ ಸೆಕ್ರೆಟೇರಿಯೆಟ್ ಅಸಿಸ್ಟೆಂಟ್
ಡಾಟಾ ಎಂಟ್ರಿ ಆಪರೇಟರ್
ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ

ವೇತನ ಶ್ರೇಣಿ:

ಲೋವರ್ ಡಿವಿಸನ್ ಕ್ಲರ್ಕ್/ ಜೂನಿಯರ್ ಸೆಕ್ರೆಟೇರಿಯೆಟ್ ಅಸಿಸ್ಟೆಂಟ್ ರೂ. 19900-63200
ಡಾಟಾ ಎಂಟ್ರಿ ಆಪರೇಟರ್ 29200-92300
ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ 25500-81100

ಕೇಂದ್ರ ಸರ್ಕಾರದ ನಿಯಮಾನುಸಾರ ಮೂಲವೇತನ ಜೊತೆಗೆ ಡಿಎ, ಎಚ್.ಆರ್.ಎ & ಇನ್ನಿತರ ಸೌಲಭ್ಯ ದೊರೆಯಲಿವೆ.

ವಿದ್ಯಾರ್ಹತೆ / Qualification

ದಿನಾಂಕ 01-08-2024 ಕ್ಕೆ ಅಭ್ಯರ್ಥಿಗಳು ಮಾನ್ಯತೆ ಹೊಂದಿದ ಸಂಸ್ಥೆಯಿಂದ ಪಿಯುಸಿ ಅಥವಾ 12 ನೇ ತರಗತಿ ಅಥವಾ ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

 

ವಯೋಮಿತಿ/ Age limit: (As on 01-08-2024)

ಕನಿಷ್ಟ ವಯೋಮಿತಿ : 18 ವರ್ಷ ಪೂರೈಸಿರಬೇಕು 

ಗರಿಷ್ಟ ವಯೋಮಿತಿ: 27 ವರ್ಷವನ್ನು ಮೀರಿರಬಾರದು.

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ/ Application Fees:

ಸಾಮಾನ್ಯ/ OBC/ EWS ಅರ್ಹತಾ ಅಭ್ಯರ್ಥಿಗಳಿಗೆ: ರೂ. 100/-

ಮಹಿಳೆಯರು/ ಪ.ಜಾ/ ಪಪಂ/ ಅಂಗವಿಕಲ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕವಿಲ್ಲ

ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಕೆಳಕಂಡಂತೆ ಆಯ್ಕೆ ಮಾಡಲಾಗುತ್ತದೆ.

Tier 1 : (Preliminary Examination)

Tier 2:  (Mains Exam)

ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ONLINE ಅರ್ಜಿಗಳನ್ನು ದಿನಾಂಕ 08.04.2024 ರಿಂದ 07.05.2024ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು SSC ಯ  ವೆಬ್ ಸೈಟ್ www.ssc.gov.in   ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ  ಹಾಕಿ

ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 08-04-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-05-2024

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 08-05-2024

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification: Download

ಅರ್ಜಿ ಸಲ್ಲಿಸಿ/ Apply Online: Click here

ವೆಬ್ಸೈಟ್/ Website


Click to Share
Bookmark the permalink.

About edutechkannada.com

www.edutechkannada.com Educator

2 Responses to SSC CHSL Recruitment 2024: ಪಿಯುಸಿ ಅಥವಾ ಡಿಪ್ಲೋಮಾ ಮುಗಿದವರಿಗೆ ಒಟ್ಟು 3712 ಗುಮಾಸ್ತ & ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

  1. Pingback: - EduTech Kannada

  2. Pingback: ನೌಕಪಡೆಯಲ್ಲಿ ಹತ್ತನೇ, ಪಿಯುಸಿ ಮುಗಿದವರಿಗೆ 4000 ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ ರೂ. 50000/- Indian Navy

Leave a Reply

Your email address will not be published. Required fields are marked *