ಸರ್ಕಾರಿ ನೌಕರರಿಗೆ ದಸರಾ ಬಂಪರ್ ಗಿಫ್ಟ್- 4% ತುಟ್ಟಿಭತ್ಯೆ (DA) ಹೆಚ್ಚಳ: ಜುಲೈ 1, 2023 ರಿಂದ ಅರಿಯರ್ಸ್- Central Govt. Employees DA Hike July 2023
ಸ್ನೇಹಿತರೇ ನಮಸ್ತೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ಘೋಷಣೆಯಾಗಿದೆ. 4% ತುಟ್ಟಿಭತ್ಯೆ ಹೆಚ್ಚಿಸಲು ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದೆ ಎಂಬ ವರದಿ ಸಿಕ್ಕಿದೆ, ಇನ್ನೆರಡು ದಿನಗಳಲ್ಲಿ ಇದರ ಅಧಿಕೃತ ಘೋಷಣೆ ಹೊರಬೀಳಲಿದೆ. ಇದರಿಂದ ಕೇಂದ್ರ ಸರ್ಕಾರದ 48.67 ಲಕ್ಷ ನೌಕರರಿಗೆ & 67.95 ಪಿಂಚಣಿದಾರರಿಗೆ ತಮ್ಮ ವೇತನದಲ್ಲಿ ಹೆಚ್ಚಳವಾಗಲಿದೆ.
ಕೇಂದ್ರ ಸರ್ಕಾರ ಪ್ರತಿ ವರ್ಷ ಜನೆವರಿ & ಜುಲೈ ನಲ್ಲಿ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುತ್ತದೆ. ಆದರೆ ಕೆಲವೊಮ್ಮೆ ಘೋಷಣೆ ತಡವಾದರೂ ನೌಕರರಿಗೆ ಅರಿಯರ್ಸ್ ನೀಡಲಾಗುತ್ತದೆ. ಪ್ರಸ್ತುತ ಜುಲೈ 1, 2023 ರಿಂದ ತುಟ್ಟಿಭತ್ಯೆ ಹೆಚ್ಚಳದ ಲಾಭ ದೊರಕುತ್ತದೆ. ಈ ಹೆಚ್ಚಳದೊಂದಿಗೆ ತುಟ್ಟಿಭತ್ಯೆ ಶೇಕಡ 42% ನಿಂದ 46% ಕ್ಕೆ ಹೆಚ್ಚಳವಾಗುತ್ತದೆ ಹಾಗೇಯೆ ಜುಲೈ 1 ರಿಂದ ಹೆಚ್ಚಳದ ಅರಿಯರ್ಸ್ ಅನ್ನು ನೌಕರರಿಗೆ ನೀಡಲಾಗುತ್ತದೆ.
ಪಿಯುಸಿ ಮುಗಿದವರಿಂದ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳಿಗೆ ಅರ್ಜಿ ಆಹ್ವಾನ: KSS College SDA Jobs 2023
ರಾಜ್ಯ ಸರ್ಕಾರಿ ನೌಕರರಿಗೆ ಡಿಎ ಘೋಷಣೆ:
ಸಾಮಾನ್ಯವಾಗಿ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಘೋಷಣೆ ಮಾಡಿದ ನಂತರ ಕರ್ನಾಟಕ ಸರ್ಕಾರ ಘೋಷಣೆ ಮಾಡುವುದು ವಾಡಿಕೆಯಾಗಿರುತ್ತದೆ. ಕೇಂದ್ರ ಸರ್ಕಾರ ನೀಡಿರುವ ಶೇಕಡವಾರು ಡಿಎ ಹೆಚ್ಚಳದಷ್ಟು ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಡಿಎ ಯನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಶೀಘ್ರವೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ.
ಡಿಎ ಹೆಚ್ಚಳದ ಮಾನದಂಡಗಳೇನು?
ಕೇಂದ್ರ ಸರ್ಕಾರವು ತುಟ್ಟಿಭತ್ಯೆ ನೀಡುವಾಗ ವಿವಿಧ ಮಾನದಂಡಗಳನ್ವಯ ಲೆಕ್ಕ ಹಾಕಲಾಗುತ್ತದೆ. ಸಾಮಾನ್ಯವಾಗಿ ಕೈಗಾರಿಕಾ ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI- IW) ಆಧಾರದ ಮೇಲೆ ತುಟ್ಟಿಭತ್ಯೆ ನಿರ್ಧಾರ ಮಾಡಲಾಗುತ್ತದೆ. ಆ ಪ್ರಕಾರವಾಗಿ ಶೇ. 4% ನಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಿದೆ.
ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತ ಲ್ಯಾಪ್‌ಟ್ಯಾಪ್ ಯೋಜನೆ ಜಾರಿ| Free Laptap Scheme for Students
ಕನಿಷ್ಟ ಎಷ್ಟು ವೇತನ ಹೆಚ್ಚಳ:
ತುಟ್ಟಿಭತ್ಯೆಯನ್ನು ಮೂಲವೇತನಕ್ಕೆ ಲೆಕ್ಕ ಹಾಕಲಾಗುತ್ತದೆ. ಒಬ್ಬ ನೌಕರ ಪ್ರತಿ ತಿಂಗಳ ಮೂಲವೇತನ ರೂ. 20000/- ಇದ್ದರೇ, ಆತನ ಡಿಎ ಹೆಚ್ಚಳದ ಮೊತ್ತ ಪ್ರತಿ ತಿಂಗಳು ರೂ. 800 ಆಗಿರುತ್ತದೆ.
ಸ್ನೇಹಿತರೇ ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಬಾವಿಸುತ್ತೇವೆ. ಇದೇ ರೀತಿಯ ನಿರಂತರ ಅಪ್ಡೇಟ್ಸ್ ಗಳಿಗೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿಕೊಳ್ಳಿ.
Pingback: ಪಿಯುಸಿ ಮುಗಿದವರಿಂದ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳಿಗೆ ಅರ್ಜಿ ಆಹ್ವಾನ: KSS College SDA Jobs 2023 - edutechkannada.com
Pingback: EMRS ನ 10391 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ ಬಿಡುಗಡೆ- ಅರ್ಜಿ ಸಲ್ಲಿಸಿದವರು ಈ ಕೆಲ