ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತ ಲ್ಯಾಪ್‌ಟ್ಯಾಪ್ ಯೋಜನೆ ಜಾರಿ| Free Laptap Scheme for Students

Click to Share

ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತ ಲ್ಯಾಪ್‌ಟ್ಯಾಪ್ ಯೋಜನೆ ಜಾರಿ| Free Laptap Scheme for Students

ಸ್ನೇಹಿತರೆ ನಮಸ್ತೆ ಕರ್ನಾಟಕ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ ಕೈಗೊಂಡಿದ್ದು, ಕರ್ನಾಟಕ ರಾಜ್ಯದಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಕೊಡುವ ಸಂಬಂಧ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಕುರಿತು ಅರ್ಹತಾ ವಿವರಗಳು, ಬೇಕಾಗುವ ದಾಖಲೆಗಳು ಮತ್ತು ಇನ್ನಿತರ ಮಾಹಿತಿಗಳನ್ನು ಇಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಈ ಸದಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ.

ಪಿಯುಸಿ ಮುಗಿದವರಿಗೆ 7547 ಹುದ್ದೆಗಳ ನೇರ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಯಿಂದ ರಾಜ್ಯ ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಣಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಉಚಿತ ಲ್ಯಾಪ್ ಟಾಪ್ ವಿತರಿಸಲು 2023-24ನೇ ಸಾಲಿನಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಉಚಿತ ಲ್ಯಾಪ್ ಟಾಪ್ ಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಸೌಲಭ್ಯವನ್ನು ಪಡೆಯುವುದಕ್ಕೆ ಮುಖ್ಯವಾಗಿ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಮಾರ್ಚ್ 31, 2023ರ ಒಳಗಾಗಿ ನೋಂದಣಿ ಮಾಡಿಕೊಂಡಿರಬೇಕು & ಅಂತಹ ಕಟ್ಟಡ ಕಾರ್ಮಿಕರ ಮಕ್ಕಳು ಪಿಯುಸಿಯಲ್ಲಿ ಓದುತ್ತಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ರಾಜ್ಯ ಆರೋಗ್ಯ ಇಲಾಖೆಯಲ್ಲಿನ KSAPS ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಪಡೆಯುವುದೆ ಹೇಗೆ?

ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು ಅಥವಾ ತಾಲೂಕು ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 26ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ ಅವರ ಕಚೇರಿ ಉಪವಿಭಾಗ-1,  ಬೆಂಗಳೂರು ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ಕಟ್ಟಡ, ಮೊದಲನೇ ಮಹಡಿ, ಮಂಜುನಾಥ ನಗರ, ಬಾಗಲಗುಂಟೆ, ಬೆಂಗಳೂರು 73 ಅಥವಾ ದೂರವಾಣಿ ಸಂಖ್ಯೆ 9845587605, 8105084941 ಮೂಲಕ ಸಂಪರ್ಕಿಸಬಹುದು.

ಗ್ರಾಮ ಪಂಚಾಯತ್ ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ

ಬೇಕಾಗುವ ದಾಖಲೆಗಳು/ Required Documents:

 • ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ನೀಡುವ ನೋಂದಾವಣಿ ಪ್ರಮಾಣ ಪತ್ರ
 • ಪಿಯುಸಿ ತರಗತಿಗೆ ಪ್ರವೇಶ ಪಡೆದಿರುವ ದಾಖಲೆ
 • ಆಧಾರ್ ಕಾರ್ಡ್
 • ಇತ್ತೀಚಿನ ಭಾವಚಿತ್ರ
 • ಜಾತಿ & ಆದಾಯ ಪ್ರಮಾಣಪತ್ರ
 • ಎಸ್‌ಎಸ್‌ಎಲ್‌ಸಿ‌ ಅಂಕಪಟ್ಟಿ
 • ವಾಸಸ್ಥಳ ದೃಢೀಕರಣ ಪತ್ರ
 • ಇತರೆ ದಾಖಲೆಗಳು


Click to Share
Bookmark the permalink.

About edutechkannada.com

www.edutechkannada.com Educator

10 Responses to ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತ ಲ್ಯಾಪ್‌ಟ್ಯಾಪ್ ಯೋಜನೆ ಜಾರಿ| Free Laptap Scheme for Students

 1. Mahamad jilani says:

  Hi

 2. Mahamad jilani says:

  wel come

 3. Pingback: ಆಹಾರ ಇಲಾಖೆಯಲ್ಲಿ ಖಾಲಿ ಇರುವ ಸೆಕ್ರೆಟೆರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: NIFTEM PS Recruitment 2023 - edutechkannada.com

 4. Pingback: SCHOLARSHIP : ಪ್ರೌಢಶಾಲೆಯಿಂದ ಸ್ನಾತಕೋತ್ತರ ವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ರೂ. 35000/-  ಪ್ರೊತ್ಸಾಹ ಧನ| KLWB Scholarship 202

 5. Pingback: KMF ಜಿಲ್ಲಾ ಹಾಲು ಉತ್ಪಾದಕರ ಸಂಘದಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟ: ಕ್ಲರ್ಕ್, ಆಡಳಿತ ಸಹಾಯಕ & ಕಿರಿಯ ತಾಂತ್ರಿಕ ಸ

 6. Veeresh says:

  Student laptop

 7. Savin says:

  Great

 8. Pingback: ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ನಿಯಮಿತ ದಿಂದ ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯ : KMMD Karnataka Application for Various Sc

 9. Pingback: ಪರಿಶಿಷ್ಟ ಜಾತಿ & ಇತರೆ ವಿದ್ಯಾರ್ಥಿಗಳಿಗೆ ಪೂರ್ವ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ: 26 ಲಕ್ಷ ವ

 10. Pingback: ಸರ್ಕಾರಿ ನೌಕರರಿಗೆ ದಸರಾ ಬಂಪರ್ ಗಿಫ್ಟ್-  4% ತುಟ್ಟಿಭತ್ಯೆ (DA) ಹೆಚ್ಚಳ: ಜುಲೈ 1, 2023 ರಿಂದ ಅರಿಯರ್ಸ್- Central Govt. Employees DA Hike Jul

Leave a Reply

Your email address will not be published. Required fields are marked *