ಪರಿಶಿಷ್ಟ ಜಾತಿ & ಇತರೆ ವಿದ್ಯಾರ್ಥಿಗಳಿಗೆ ಪೂರ್ವ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ: 26 ಲಕ್ಷ ವಿದ್ಯಾರ್ಥಿಗಳಿಗೆ ಸಿಗಲಿದೆ ಈ ಯೋಜನೆ. Social Justice Scholarship Scheme
ಸ್ನೇಹಿತರೆ ನಮಸ್ತೆ ಭಾರತ ಸರ್ಕಾರದ ಸಾಮಾಜಿಕ ನ್ಯಾಯ & ಸಬಲೀಕರಣ ಇಲಾಖೆಯಿಂದ ದೇಶದ ಬಹುದೊಡ್ಡ ಸ್ಕಾಲರ್ಶಿಪ್ ಯೋಜನೆಗೆ ಪೂರ್ವ ಮೆಟ್ರಕ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2023-24 ನೇ ಸಾಲಿನ ಪರಿಶಿಷ್ಟ ಜಾತಿ & ಇತರೆ ವಿದ್ಯಾರ್ಥಿಗಳಿಗೆ ಪೂರ್ವ-ಮೆಟ್ರಿಕ್ ಸ್ಕಾಲರ್ ಶಿಪ್ ಯೋಜನೆಯ ಅಡಿಯಲ್ಲಿ 26 ಲಕ್ಷ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲು ಅರ್ಜಿ ಕರೆಯಲಾಗಿದೆ. ಆಸಕ್ತರು ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಕುರಿತು ಅರ್ಹತಾ ವಿವರಗಳು, ಬೇಕಾಗುವ ದಾಖಲೆಗಳು ಮತ್ತು ಇನ್ನಿತರ ಮಾಹಿತಿಗಳನ್ನು ಇಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಈ ಸದಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ.
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ನಿಯಮಿತ ದಿಂದ ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯ
ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಸಾಮಾಜಿಕ ನ್ಯಾಯ & ಸಬಲೀಕರಣ ಇಲಾಖೆಯ ವೆಬ್ಸೈಟ್ socialjustice.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಹತೆಗಳು/ Eligibility:
1) ವಿದ್ಯಾರ್ಥಿಯು ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿರಬೇಕು.
2) ಪಾಲಕರ/ ಪೋಷಕರ ವಾರ್ಷಿಕ ಆದಾಯ ರೂ. 2.50 ಲಕ್ಷ ಮೀರಿರಕೂಡದು.
3) ಪಾಲಕರು/ ಪೋಷಕರು ಶುಚಿಗೊಳಿಸುವಿಕೆ & ಆರೋಗ್ಯದ ಆಪಾಯಗಳಿಗೆ ಗುರಿಯಾಗುವ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸು ತ್ತಿದ್ದರೆ ಯಾವುದೇ ಆದಾಯದ ಮೀತಿ ಮಾನದಂಡಗಳಿಲ್ಲ.
4) ಅಂಗೀಕೃತ ಶಾಲೆಗಳಲ್ಲಿ 9ನೇ & 10ನೇ ತರಗತಿ ತರಗತಿಯಲ್ಲಿ ಓದುತ್ತಿರಬೇಕು.
SCHOLARSHIP : ಪ್ರೌಢಶಾಲೆಯಿಂದ ಸ್ನಾತಕೋತ್ತರ ವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ರೂ. 35000/- ಪ್ರೊತ್ಸಾಹ ಧನ
ಭತ್ಯೆಗಳ ವಿವರ:
ವಾರ್ಷಿಕವಾಗಿ ರೂ. 3500/- ರಿಂದ 8000 ಅಕಾಡೆಮಿಕ್ ಭತ್ಯೆ ನೀಡಲಾಗುತ್ತದೆ. ದಿವ್ಯಾಂಗ ವಿದ್ಯಾರ್ಥಿಗಳಿಗೆ 10% ಹೆಚ್ಚುವರಿ ಭತ್ಯೆ ನೀಡಲಾಗುತ್ತದೆ.
ಪ್ರಮುಖ ಸೂಚನೆಗಳು:
ವಿದ್ಯಾರ್ಥಿಗಳು ತಮಗೆ ಸಂಬಂಧಿತ ರಾಜ್ಯದ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವುದು.
ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಅಧಿಕೃತ ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆ, ಆಧಾರ ಸೀಡೆಡ್ ಬ್ಯಾಂಕ್ ಖಾತೆ, ಆದಾಯ ಪ್ರಮಾಣಪತ್ರ & ಜಾತಿ ಪ್ರಮಾಣಪತ್ರ ಹೊಂದಿರತಕ್ಕದ್ದು.
ಯೋಜನೆಯ ಮಾರ್ಗಸೂಚಿಗಳು & ಅರ್ಹತಾ ಮಾನದಂಡ ವಿವರಗಳು http://socialjustice.gov.in ವೆಬ್ಸೈಟ್ ನಲ್ಲಿ ಲಭ್ಯವಿರುತ್ತವೆ.
ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತ ಲ್ಯಾಪ್‌ಟ್ಯಾಪ್ ಯೋಜನೆ ಜಾರಿ
IMPORTANT LINKS:
Is to good for students
Pingback: ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Government employees cooperative bank recruitment 2023 -