ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ (KARTET) ಅರ್ಜಿ ಆಹ್ವಾನ: KARTET Examination 2024

Click to Share

ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ (KARTET) ಅರ್ಜಿ ಆಹ್ವಾನ: KARTET Examination 2024

ಕರ್ನಾಟಕ  ಶಾಲಾ ಶಿಕ್ಷಣ ಇಲಾಖೆಯಿಂದ 2024 ನೇ ಸಾಲಿನ  ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ (KARTET) ಅಧಿಸೂಚನೆ ಪ್ರಕಟವಾಗಿದೆ. ರಾಜ್ಯದ ಶಿಕ್ಷಕ ಆಕಾಂಕ್ಷಿಗಳು ಪ್ರಾಥಮಿಕ & ಟಿಜಿಟಿ ಶಿಕ್ಷಕರಾಗಲು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET) ಅರ್ಹತೆ ಹೊಂದಿರುವುದು ಕಡ್ಡಾಯವಾಗಿರುತ್ತದೆ & ಇದರಲ್ಲಿ ಪಡೆದ ಅಂಕಗಳು ಮೆರಿಟ್ ಪಟ್ಟಿಯಲ್ಲಿ ಪರಿಗಣನೆ ಆಗುತ್ತದೆ. ಆದ್ದರಿಂದ ಈ ಹಿಂದೆ ಎಷ್ಟೆ ಬಾರಿ ನೀವು ಅರ್ಹತೆಯನ್ನು ಪಡೆದಿದ್ದರೂ, ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಮತ್ತೆ KARTET ಪರೀಕ್ಷೆ ತೆಗೆದುಕೊಳ್ಳಬಹುದು.   ಪ್ರಸ್ತುತ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದ್ದು, ದಿನಾಂಕ 15-05-2024 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಇನ್ನು ಅರ್ಜಿ ಸಲ್ಲಿಸದವರು ಕೂಡಲೇ ‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಿಕಾಸ ಸೌಹಾರ್ದ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ ಶಾಖಾ ವ್ಯವಸ್ಥಾಪಕರು, ಲೆಕ್ಕ ಪರಿಶೋಧನಾಧಿಕಾರಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ಪ್ರಕಟಣೆ ಹೊರಬಿದ್ದಿದೆ. KARTET ಪರೀಕ್ಷೆಗೆ ಸಂಬಂಧಿಸಿದಂತೆ ಅರ್ಹತೆಗಳು, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಕರ್ನಾಟಕದ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಕ್ಲರ್ಕ್ & ಚಾಲಕರು ಸೇರಿ ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಪತ್ರಿಕೆಗಳು/ Papers:

ಪತ್ರಿಕೆ 1/ Paper 1: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1-5 ನೇ ತರಗತಿ ಶಿಕ್ಷಕರಾಗಲು ಈ ಪರೀಕ್ಷೆಯನ್ನು ಅರ್ಹತೆ ಹೊಂದಿರಬೇಕು.

ಪತ್ರಿಕೆ 2/ Paper 2:

ರಾಜ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 5-8 ನೇ ತರಗತಿ ಶಿಕ್ಷಕರಾಗಲು ಈ ಪರೀಕ್ಷೆಯನ್ನು ಅರ್ಹತೆ ಹೊಂದಿರಬೇಕು.

ಶೈಕ್ಷಣಿಕ ಅರ್ಹತೆಗಳು/ Educational Qualification:

ಪತ್ರಿಕೆ 1/ Paper 1:

ಕನಿಷ್ಟ 50% ಅಂಕಗಳೊಂದಿಗೆ ಪಿಯುಸಿ/ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು & ಕನಿಷ್ಟ 50% ಅಂಕಗಳೊಂದಿಗೆ ಡಿಇಡಿ/  ಬಿಇಡಿ/ ಬಿಪಿಇಡಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಪತ್ರಿಕೆ 2/ Paper 2:

ಕನಿಷ್ಟ 50% ಅಂಕಗಳೊಂದಿಗೆ ಪಿಯುಸಿ/ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು & ಕನಿಷ್ಟ 50% ಅಂಕಗಳೊಂದಿಗೆ ಡಿಇಡಿ/  ಬಿಇಡಿ/ ಬಿಪಿಇಡಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಕನಿಷ್ಟ 50% ಅಂಕಗಳೊಂದಿಗೆ ಪಿಯುಸಿ/ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು & ಕನಿಷ್ಟ 50% ಅಂಕಗಳೊಂದಿಗೆ ಡಿಇಡಿ/  ಬಿಇಡಿ/ ಬಿಪಿಇಡಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ/ Application Fees:

ಸಾಮಾನ್ಯ ವರ್ಗ/ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ:

ಯಾವುದಾದರೂ ಒಂದು ಪತ್ರಿಕೆ (ಪತ್ರಿಕೆ 1 ಅಥವಾ ಪತ್ರಿಕೆ 2): ರೂ. 700/-

ಎರಡು ಪತ್ರಿಕೆಗಳು (ಪತ್ರಿಕೆ 1 & ಪತ್ರಿಕೆ 2): ರೂ. 1000/-

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ 1 ಅಭ್ಯರ್ಥಿಗಳಿಗೆ:

ಯಾವುದಾದರೂ ಒಂದು ಪತ್ರಿಕೆ (ಪತ್ರಿಕೆ 1 ಅಥವಾ ಪತ್ರಿಕೆ 2): ರೂ. 350/-

ಎರಡು ಪತ್ರಿಕೆಗಳು (ಪತ್ರಿಕೆ 1 & ಪತ್ರಿಕೆ 2): ರೂ. 500/-

ವಿಶೇಷ ಅಗತ್ಯತೆಯುಳ್ಳ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇರುತ್ತದೆ.

ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್/ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮೂಲಕ ಅಥವಾ ಚಲನ್ ಮೂಲಕ ಪಾವತಿಸಬಹುದು.

ವಯೋಮಿತಿ/ Age limit:

ಗರಿಷ್ಟ ವಯೋಮಿತಿ ಇರುವುದಿಲ್ಲ.

ಆಯ್ಕೆವಿಧಾನ/ Selection procedure:

  • ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ
  • ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು: ಎಲ್ಲ ಜಿಲ್ಲಾ ಕೇಂದ್ರಗಳು
  • ಪ್ರತಿ ಪತ್ರಿಕೆಯು 150 ಅಂಕಗಳನ್ನೊಳಗೊಂಡ ಬಹು ಆಯ್ಕೆ ಮಾದರಿಯ ಪರೀಕ್ಷೆಯಾಗಿರುತ್ತದೆ.
  • ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ.
  • ಪರೀಕ್ಷೆಯ ಅವಧಿಯು 2 ಗಂಟೆ 30 ನಿಮಿಷ ಮಾತ್ರ

ಅರ್ಹತೆ/ Eligibility:

ಈ ಪರೀಕ್ಷೆಯಲ್ಲಿ ಅರ್ಹತೆ ಹೊಂದಲು ಸಾಮಾನ್ಯ & 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳು ಶೇ. 60% ಅಂಕಗಳನ್ನು ಪಡೆಯಬೇಕು ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ & ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳು ಕನಿಷ್ಟ ಶೇ. 55% ಅಂಕಗಳನ್ನು ಗಳಿಸಬೇಕು.

 ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 15.04.2024 ರಿಂದ 15.05.2024ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಶಿಕ್ಷಣ ಇಲಾಖೆಯ  ವೆಬ್ ಸೈಟ್ www.schooleducation.kar.nic.in  ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ..

ಜಿಲ್ಲಾ ಕೋಆಪರೇಟಿವ್ ಬ್ಯಾಂಕುಗಳಲ್ಲಿ ಖಾಲಿ ಇರುವ ಕ್ಲರ್ಕ್ ಕಮ್ ಕ್ಯಾಶಿಯರ್ ಸೇರಿ ವಿವಿಧ 233 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 15-04-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-05-2025

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 16-05-2024

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply Online:

ವೆಬ್ಸೈಟ್/ Website :

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click to Share
Bookmark the permalink.

About edutechkannada.com

www.edutechkannada.com Educator