ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್- 3.75% ತುಟ್ಟಿಭತ್ಯೆ (DA) ಹೆಚ್ಚಳ: ಜುಲೈ 1, 2023 ರಿಂದ ಅರಿಯರ್ಸ್- State Govt. Employees DA Hike July 2023
ಸ್ನೇಹಿತರೇ ನಮಸ್ತೆ ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ ಘೋಷಣೆಯಾಗಿದೆ. 3.75% ತುಟ್ಟಿಭತ್ಯೆ ಹೆಚ್ಚಿಸಲು ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದೆ ಎಂಬ ವರದಿ ಸಿಕ್ಕಿದೆ, ಇನ್ನೆರಡು ದಿನಗಳಲ್ಲಿ ಇದರ ಅಧಿಕೃತ ಘೋಷಣೆ ಹೊರಬೀಳಲಿದೆ. ಇದರಿಂದ ಕರ್ನಾಟಕ ಸರ್ಕಾರದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ & ಅನುದಾನಿತ ಶಿಕ್ಷಣ ಸಂಸ್ಥೆಗಳ ಸುಮಾರು 3 ಲಕ್ಷ ನೌಕರರು ಹಾಗೂ 4.50 ಪಿಂಚಣಿದಾರರಿಗೆ ತಮ್ಮ ವೇತನದಲ್ಲಿ ಹೆಚ್ಚಳವಾಗಲಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್- 3.75% ತುಟ್ಟಿಭತ್ಯೆ (DA) ಹೆಚ್ಚಳ: ಜುಲೈ 1, 2023 ರಿಂದ ಅರಿಯರ್ಸ್
ಕರ್ನಾಟಕ ಸರ್ಕಾರ ಪ್ರತಿ ವರ್ಷ ಜನೆವರಿ & ಜುಲೈ ನಲ್ಲಿ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುತ್ತದೆ. ಆದರೆ ಕೆಲವೊಮ್ಮೆ ಘೋಷಣೆ ತಡವಾದರೂ ನೌಕರರಿಗೆ ಅರಿಯರ್ಸ್ ನೀಡಲಾಗುತ್ತದೆ. ಪ್ರಸ್ತುತ ಜುಲೈ 1, 2023 ರಿಂದ ತುಟ್ಟಿಭತ್ಯೆ ಹೆಚ್ಚಳದ ಲಾಭ ದೊರಕುತ್ತದೆ. ಈ ಹೆಚ್ಚಳದೊಂದಿಗೆ ತುಟ್ಟಿಭತ್ಯೆ ಶೇಕಡ 35% ನಿಂದ 38.75% ಕ್ಕೆ ಹೆಚ್ಚಳವಾಗುತ್ತದೆ ಹಾಗೇಯೆ ಜುಲೈ 1 ರಿಂದ ಹೆಚ್ಚಳದ ಅರಿಯರ್ಸ್ ಅನ್ನು ನೌಕರರಿಗೆ ನೀಡಲಾಗುತ್ತದೆ.
ರಾಯಚೂರು ಜಿಲ್ಲಾ ಪಂಚಾಯತ್ ನಲ್ಲಿ 22 ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Raichur ZP Jobs 2023
ರಾಜ್ಯ ಸರ್ಕಾರಿ ನೌಕರರಿಗೆ ಡಿಎ ಘೋಷಣೆ:
ಇತ್ತೀಚೆಗೆ ಕೇಂದ್ರ ಸರ್ಕಾರ ತನ್ನ ನೌಕರರು & ಪಿಂಚಣಿದಾರರಿಗೆ ಶೇ. 42 ರಿಂದ 46 ರಷ್ಟಕ್ಕೆ ತುಟ್ಟಿಭತ್ಯೆಯನ್ನು ಹೆಚ್ಚಿಸಿತು ಅದರ ಆಧಾರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು ಹಣಕಾಸು ಇಲಾಖೆಗೆ ಶೇ. 4% ಡಿಎ ಹೆಚ್ಚಿಸಲು ಮನವಿ ಮಾಡಿಕೊಂಡಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಶೇ. 3.75% ರಷ್ಟು ಡಿಎ ಹೆಚ್ಚಿಸಿದೆ.
ರಾಜ್ಯದಲ್ಲಿ ಸೇವೆಯಲ್ಲಿರುವ UGC, AICTE/ ICAR ವೇತನ ಶ್ರೇಣಿಗಳ ಬೋಧಕ ಸಿಬ್ಬಂದಿಯವರಿಗೆ ಹಾಗೂ NJPC ವೇತನ ಶ್ರೇಣಿ ಪಡೆಯುತ್ತಿರುವ ನ್ಯಾಯಾಂಗ ಅಧಿಕಾರಿಗಳಿಗೆ ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಡಿಎ ಹೆಚ್ಚಳದ ಮಾನದಂಡಗಳೇನು?
ಸರ್ಕಾರವು ತುಟ್ಟಿಭತ್ಯೆ ನೀಡುವಾಗ ವಿವಿಧ ಮಾನದಂಡಗಳನ್ವಯ ಲೆಕ್ಕ ಹಾಕಲಾಗುತ್ತದೆ. ಸಾಮಾನ್ಯವಾಗಿ ಕೈಗಾರಿಕಾ ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI- IW) ಆಧಾರದ ಮೇಲೆ ತುಟ್ಟಿಭತ್ಯೆ ನಿರ್ಧಾರ ಮಾಡಲಾಗುತ್ತದೆ. ಆ ಪ್ರಕಾರವಾಗಿ ಶೇ. 3.75% ನಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಿದೆ.
ಕನಿಷ್ಟ ಎಷ್ಟು ವೇತನ ಹೆಚ್ಚಳ:
ತುಟ್ಟಿಭತ್ಯೆಯನ್ನು ಮೂಲವೇತನಕ್ಕೆ ಲೆಕ್ಕ ಹಾಕಲಾಗುತ್ತದೆ. ಒಬ್ಬ ನೌಕರ ಪ್ರತಿ ತಿಂಗಳ ಮೂಲವೇತನ ರೂ. 20000/- ಇದ್ದರೇ, ಆತನ ಡಿಎ ಹೆಚ್ಚಳದ ಮೊತ್ತ ಪ್ರತಿ ತಿಂಗಳು ರೂ. 750/- ಆಗಿರುತ್ತದೆ.
ಸ್ನೇಹಿತರೇ ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಬಾವಿಸುತ್ತೇವೆ. ಇದೇ ರೀತಿಯ ನಿರಂತರ ಅಪ್ಡೇಟ್ಸ್ ಗಳಿಗೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿಕೊಳ್ಳಿ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com